ಶ್ರೀ ರಾಘವೇಂದ್ರಾಚಾರ್ಯರು ಒಮ್ಮೆ ಶ್ರೀ ವಿಜಯರಾಯರ ಆರಾಧನೆಗೆ ಚಿಪ್ಪಗಿರಿಗೆ ಹೋಗಿದ್ದಾಗ ಶ್ರೀ ಶ್ರೀವರವಿಠ್ಠಲರನ್ನು ಭೇಟಿಯಾಗಿ ಅವರಿಂದ ಶ್ರೀ ವಿಜಯರಾಯರ ಮುಂಭಾಗದಲ್ಲಿಯೇ " ಮುದ್ದು ಮೋಹನ ವಿಠ್ಠಲ " ಎಂಬ ಅಂಕಿತವನ್ನು ಪಡೆದ ಸುಜೀವಿಗಳು.
ಮುದ್ದು ಮೋಹನವಿಟ್ಠಲ ಸಲಹೋ ಇವನಾ ಪ
ಸಿರಿ ಮನೋಹರ ನಿನ್ನ ಪ್ರಾರ್ಥಿಸುವೆ ನಿರುತ ಅ.ಪ
ಶಿರಿ ಬೊಮ್ಮ ಮೊದಲಾದ ಸುರರಿಂದ ಸೇವಿತನೆ
ಪರಮ ಕರುಣಾಳು ಹರಿ ಕರಿವರದನೇ
ನಿರುತದಲಿ ನಿನ್ನ ನಾಮ ಸ್ಮರಣೆಯನಿತ್ತು
ಕರುಣದಲಿ ರಕ್ಷಿಸೋ ಪರಮ ಪಾವನನೇ 1
ಗುರು ಹಿರಿಯರಲಿ ಭಕುತಿ ವಿಷಯದಲಿ ವಿರುಕುತೀ
ಪಿರಿದಾದ ಪಂಚಭೇದವನು ಅರುಪೀ
ಕರಿವರದನೇ ನಿನ್ನ ನಾಮಾಮೃತಸಾರ ಉಣಿಸೀ
ದುರಿತಗಳ ಪರಿಹರಿಸೋ ಪರಮಪಾವನನೇ 2
ನಾನು ನನ್ನದು ಎಂಬದುರಭಿಮಾನವನು ಬಿಡಿಸೀ
ಸಾನುರಾಗದಲಿ ತಾರತಮ್ಯಗಳ ತಿಳಿಸೋ
ಮಾನನಿಧಿ ನೀನೆ ಸರ್ವೋತ್ತಮಾನೆಂಬಂಥ
ಜ್ಞಾನದಾಯಕನಾಗೋ ಶ್ರೀ ವರವಿಟ್ಠಲಾ 3
***
ಮುದ್ದು ಮೋಹನವಿಟ್ಠಲ
ಸಲಹೋ ಇವನಾ ।। ಪಲ್ಲವಿ ।।
ಸಿರಿ ಮನೋಹರ ನಿನ್ನ
ಪ್ರಾರ್ಥಿಸುವೆ ನಿರುತಾ ।। ಅ. ಪ ।।
ಶಿರಿ ಬೊಮ್ಮ ಮೊದಲಾದ
ಸುರರಿಂದ ಸೇವಿತನೆ ।
ಪರಮ ಕರುಣಾಳು
ಹರಿ ಕರಿವರದನೆ ।
ನಿರುತದಲಿ ನಿನ್ನ ನಾಮ
ಸ್ಮರಣೆಯನ್ನಿತ್ತು ।
ಕರುಣದಲಿ ರಕ್ಷಿಸೋ
ಪರಮ ಪಾವನನೆ ।। ಚರಣ ।।
ಗುರು ಹಿರಿಯರಲಿ ಭಕುತಿ
ವಿಷಯದಲಿ ವಿರಕುತಿ ।
ಪಿರಿದಾದ ಪಂಚ
ಭೇದವನ್ನು ಅರುಹೀ ।
ಕರಿವರದನೆ ನಿನ್ನ
ನಾಮಾಮೃತಸಾರ ಉಣಿಸಿ ।
ದುರಿತಗಳ ಪರಿಹರಿಸೋ
ಪರಮ ಪಾವನನೆ ।। ಚರಣ ।।
ನಾನು ನನ್ನದುಯೆಂಬ
ದುರಾಭಿಮಾನವನು ಬಿಡಿಸೀ ।
ಸಾನುರಾಗದಲಿ
ತಾರತಮ್ಯವನ್ನು ತಿಳಿಸೋ ।
ಮಾನನಿಧಿ ನೀನೇ
ಸರ್ವೋತ್ತಮನೆಂಬಂಥ ।
ಜ್ಞಾನದಾಯಕನಾಗೋ
ಶ್ರೀವರವಿಠ್ಠಲಾ ।। ಚರಣ ।।
***
No comments:
Post a Comment