..
ಇಂದು ನೋಡಿದೆ ನಾನು ಸಾಧು ಸಂತರ ಇಂದು ಕೂಡಿದೆ ಎನ್ನ ಮನದ ಪ್ರೀಯರ ಪ
ಚರಣ ಕಮಲವು ಕಾಣುತಾಕ್ಷಣಹರುಷವಾಯ್ತು ಪೂರ್ಣ ಎನ್ನ ಮನಸಿಗೆ |ಶರಧಿ ಎಬ್ಬಿದ ಪರಿಯ ಎನ್ನೊಳುಪರಮ ಚಿದ್ಘನಾನಂದ ತುಳುಕಿತು 1
ಪೇಳಲೆ ಎನ್ನಯ ಅಮಿತ ಸುಖವನುಭಾಲಲೋಚನನೆ ಬಲ್ಲ ಇದರ ಬಗೆಯನು |ಕೀಳ ಜನರಿದನೇನು ಬಲ್ಲರುಹಾಳ ಬದುಕುವದಿಂದೇತರದಿವರ ಜನ್ಮವು 2
ಸಕಲ ಸಾಧುರ ಪಾದ ಧೂಳಿಯಭಕ್ತಿಯಿಂದಲಿ ನಾನು ಬಿಡದೆ ಧರಿಸುವೆ |ಮುಕ್ತಿ ನಾಲ್ಕಕೆ ಮಿಗಿಲ ಪದವನುನಿಖಿಲ ಮೂರ್ತಿ ಜ್ಞಾನಬೋಧನೊಡೆಯನೀವನು 3
***