Showing posts with label ನೀಲಾ ಮಾಣಿಕಾ ವಜ್ರಾರತ್ನ vijaya vittala ankita suladi ಅಳಗಿರಿವಾಸ ಸುಳಾದಿ NEELA MAANIKA VAJRAA RATNA ALAGIRIVAASA SULADI. Show all posts
Showing posts with label ನೀಲಾ ಮಾಣಿಕಾ ವಜ್ರಾರತ್ನ vijaya vittala ankita suladi ಅಳಗಿರಿವಾಸ ಸುಳಾದಿ NEELA MAANIKA VAJRAA RATNA ALAGIRIVAASA SULADI. Show all posts

Monday, 9 December 2019

ನೀಲಾ ಮಾಣಿಕಾ ವಜ್ರಾರತ್ನ vijaya vittala ankita suladi ಅಳಗಿರಿವಾಸ ಸುಳಾದಿ NEELA MAANIKA VAJRAA RATNA ALAGIRIVAASA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಅಳಗಿರಿವಾಸ ಸುಳಾದಿ 

 ರಾಗ ನೀಲಾಂಬರಿ 

 ಧ್ರುವತಾಳ 

ನೀಲಾ ಮಾಣಿಕಾ ವಜ್ರಾರತ್ನ ಪಚ್ಚಾ ವೈಡೂರ್ಯಾ ಪ್ರ -
ವಾಳ ಗೋಮೇಧ ಮೌಕ್ತಿಕ ಪುಷ್ಯರಾಗಾದಿಂ 
ಕೀಲಿಸಿದ ಮಲಕು ಝಳಝಳ ಥಳ ಥಳಾಯಮಾನ 
ಮೌಳಿಯಾ ಕಂಡೆನಾ ಕಣ್ಣಿಲಿ ತಿಮ್ಮನಾ 
ಫಾಲಾ ಮೃಗ ನಾಭಿ ಸುತ್ತಿದ ಪಟ್ಟಿಸುತ್ತಾ ಪೂ -
ಮಾಲಿಗಳು ತೂಗುತಿರೆ ನವ ಪರಿಮಳವೂ ಕ -
ಪೋಲಾ ಚಿತ್ರಾ ಬರದಾ ಕದಪು ಪಚ್ಚಿದಾ ಕಪ್ಪು 
ನೀಲಾ ಕುಂತಳ ಕೇಶ ಮೃದ ಕೋಮಲಾ ಕಾಂತಿ 
ಭ್ರೂಲಲಿತಾ ಬಾಲಾ ಲತೆ ಚಿಗುವಾರುಯೊ ಕಂಡೆ 
ಮೇಲು ಕುಂಡಲಾ ಮಕರ ಕರ್ನಂತ್ತಾದಿಪ್ಪಾ ವಿ -
ಶಾಲಾಯುತ ಸೀತಳ ಕರುಣಾರಸ ಪೂರ್ಣ 
ಥಾಳಿಸುವ ನಯನಾ ಕಾಂಚಾನ ನಾಸಾನನ ಕಂಡೆ 
ಸಾಲು ದಂತ ಪಂಙ್ತಿ ಬಿಗಿ ಮುಗುಳುನಗೆ ಚಂದ್ರಿಕ
ಏಳೇಳು ಲೋಕವನು ಮುಸುಕಿರಲೂ ಬಿಂಬೋಷ್ಟ್ರ 
ವಾಲಾಯ ರವಿಚಂದ್ರ ವಂದೆಶೆಯಲ್ಲಿದ್ದಂತೆ 
ಪೋಲುತಿದೆ ಸ್ವರ ಎಳೆ ವತ್ಸರನ ಸೋಲಿಸೆ 
ಬಾಳೆತಿಳಕ್ಯೆಳಸಾಗೆ ಬೆನ್ನು ಒಪ್ಪಾಲು ಕಂಡೆ 
ನೀಲ ಲೋಹಿತ ವರದ ವಿಜಯವಿಠಲಾ ವೃಷಭ -
ಶೈಲವಾಸಾ ಅಳಗಿರಿರಾಯನ ಕಂಡೆ ॥ 1 ॥

 ಮಟ್ಟತಾಳ 

ಚತುರಭುಜ ಬಾಹು ಹಸ್ತಾಂಗುಲಿ ಮುದ್ರೆ 
ರತುನ ಕಂಕಣ ಕಡಗ ಕೇಯೂರ 
ಸತತ ಧರಿಸಿದ ಶಂಖಾರಿಗದ 
ಶತಪತ್ರಾಯುಧಾ ಶೋಭಿಸುತಿರೆ ಕಂಡೆ 
ಶತ ಧೃತಿ ಜನಕ ಶಿರಿ ವಿಜಯವಿಠಲ ವೃಷಭಾ -
ಕ್ಷಿತಿಧರ ನಿವಾಸಾ ನಿಗಮವಂದ್ಯನ ಕಂಡೆ ॥ 2 ॥

 ತ್ರಿವಿಡಿತಾಳ 

ಉರ ಉದರಾ ಸುನಾಭಿ ಕಂಬುಕಂದರ ದಿವ್ಯ 
ಶಿರಿ ವತ್ಸ ಕೌಸ್ತುಭ ತುಲಸೀದಾಮಾಹಾರ 
ಸರಿಗೆ ನ್ಯಾವಳ ವನಮಾಲೆ ವೈಜಯಂತಿ 
ಹಾರ ಹೀರ ಪಚ್ಚ ಪದಕಾ ಮುತ್ತಿನಹಾರ 
ಧರಿಸಿದವನ ಕಂಡೆ ನಾನಾ ಪುಷ್ಪವ ಕಂಡೆ 
ಕಿರಿ ಘಂಟೆ ಗೆಜ್ಜಿ ಕಾಂಚಿ ವಡ್ಯಾಣಾ ವಸನ 
ಕಿರಿಬಟ್ಟಿನಾ ಕೆಳಗೆ ಒಪ್ಪುತಿರಲೂ
ಮಿರಗೂವಾ ಕಠಾರಿ ನಡುವಿನಲಿ ಶಿಕ್ಕಿರಲು 
ಬಿರಿದು ಮಲ್ಲರ ಗಂಡ ಮಲ್ಲಾಗಂಟೂ 
ಭರದಾ ಉಡಿಗೆ ತೊಡಪು ವುಲಿವಾಬಾವಲಿ ಧೀರಾ 
ಪುರುಷ ಪರಾಕ್ರಮನ ಕಂಡೆ ಮನದಿ 
ಅರೆರೆ ಚೋರರ ಗುರು ವಿಜಯವಿಠಲ ವೃಷಭಾ -
ಗಿರಿವಾಸಾ ತಿಮ್ಮಯ್ಯ ಅಳಿಗಿರಿರಾಯಾ ॥ 3 ॥

 ಅಟ್ಟತಾಳ 

ಊರು ಜಾನು ಜಂಘೆ ಗುಲ್ಫ ಪ್ರಪದ ಪಾದ 
ತೋರುವಾ ನಖಕಾಂತಿ ಸುರಗಣ ಶಿರದಲ್ಲಿ 
ಭಾರಣೆಯಾಗಿದ್ದ ಮಕುಟ ಪ್ರಕಾಶವ 
ಮೀರಿ ತಿರೋಭಾವಗೈಸಲು ಸಂದಣಿ 
ತಾರು ದಟ್ಟಡಿಯಾಗೆ ಉದರಿದರವೆ ವಿ -
ಸ್ತಾರುವೇಗಾ ತಿರಮಳಲಂತೆ ಶೋಭಿಸಿ 
ಚಾರು ಮುತ್ತಿನ ಪೆಂಡೆ ನೂಪುರಾ ಕಡಗಾ ಬಂ -
ಗಾರದ ಗೆಜ್ಜೆ ಸರಪಳಿ ಪದ ತಳ 
ವಾರಿ ಜಾದಿ ರೇಖೆ ಪರಿಪರಿ ಬಗಿಯಿಂದ 
ಸಾರ ಸುಂದರ ನಿತ್ಯ ಬೇಡಿದಾರ್ಥವನೀವ 
ಆರಾಧಿಪರಿಗೆ ಅನುಗಾಲಾ ತಪ್ಪದೆ 
ಕಾರುಣ್ಯಮೂರುತಿ ವಿಜಯವಿಠ್ಠಲದೇವ 
ವರೇಣ್ಯಾ ವೃಷಭಾದ್ರಿ ನಿಲಯಾ ಶುಭಕಾಯಾ ॥ 4 ॥

 ಆದಿತಾಳ 

ಸುಂದರಾ ರಾಜಾ ರಾಜತೇಜಾ 
ಇಂದಿರಾ ನಾಥಾ ಪಾವನ ಪಥಾ 
ಅಂದಿಗೆ ಇಂದಾಲಿ ಆನಂದದಲಿ 
ಅಂದು ಪಡದನಾ ಕಂಡೆ 
ಸುಂದರ ರಾಜಾ ರಾಜಾತೇಜಾ 
ಇಂದು ತುರಗ ವಾಹನನಾಗಿ 
ಅಂದಾ ವಿಮಾನದಾ ಮಧ್ಯದಲ್ಲಿ 
ಚಂದಾದಿ ಮೆರೆಯುತ ಬರುವನ ಕಂಡೆ 
ಮುಂದೆ ಉರಗ ವಾಹನನಾಗಿ 
ಬಂದನು ಪೂಜಿಯಗೊಳುತಾಲಿ ಅಲ್ಲಿಂ -
ದಾನಂದದದೊಳು ಕುಳಿತದು ಕಂಡೆ 
ವೃಂದಾವನ ಪ್ರೀಯ ವಿಜಯವಿಠಲ ದೀನ -
ಬಂಧು ವೃಷಭಾದ್ರಿವಾಸನ ಕಂಡೆ ॥ 5 ॥

 ಜತೆ 

ಋಷಿ ಮಂಡೂಕ ವರದ ವಿಜಯವಿಠಲ ತಿಮ್ಮಾ 
ವೃಷಭಾದ್ರಿನಿಲಯ ಅಳಗಿರಿರಾಯನ ಕಂಡೆ ॥
******