kruti by ವೀರನಾರಾಯಣ Veeranarayana
ಎಂಥ ಧನ್ಯಳೇ ಯಶೋದೆಎಂಥ ಧನ್ಯಳೇ ಪ
ಎಂಥ ಧನ್ಯಳಮ್ಮ ನೀನುಎಂಥ ಪುಣ್ಯವಮ್ಮ ನಿನ್ನದುಕಂತುಪಿತನು ಕುವರನಾಗಿಸಂತೋಷವ ಪಡಿಸಿದನು 1
ಕಷ್ಟಪಟ್ಟು ಮುನಿಗಳೆಲ್ಲಎಷ್ಟು ತಪವ ಮಾಡಿದರುಇಷ್ಟು ಪುಣ್ಯ ಪಡೆಯಲಿಲ್ಲಸೃಷ್ಟಿಯೊಳಗೆ ಸ್ಪಷ್ಟವಿಹುದು 2
ಒಡಲೊಳಗೆ ಹೊರೆಯಲಿಲ್ಲಪಡೆಯಲಿಲ್ಲ ಅವನ ಪರರಒಡಲೊಳ್ಹುಟ್ಟಿ ಬಂದು ನಿನ್ನಹುಡುಗನಾಗಿ ಮೆರೆದ ನಮ್ಮ 3
ಇಡಿಯ ಜಗವನುದರದಲಿಹಿಡಿದು ಬಾಲನಾಗಿ ಗದುಗಿನೊಡೆಯ ವೀರನಾರಾಯಣತೊಡೆಯ ಮೇಲೆ ಆಡಿದನು 4
***