..
ಜೀವಿಸು ಜಗದಿ ಬಾಲಕನೆ | ಚಿರಂಜೀವಿಯಾಗುತ ಪ
ಚಿತ್ತಸುಶಿದ್ಧಿಯಿಂದಲಿ | ನಿತ್ಯಾನುಷ್ಟಾನ ಗೈಯುತಲಿ ||
ಸತ್ಯಸುಶೀಲನಾಗುತ | ಅತ್ಯಾನಂದವನನುಭವಿಸು 1
ಕ್ರೋಧಾದಿ ಗುಣವ ನಿಗ್ರಹಿಸಿ | ಸಾಧುಸತ್ವಥವಲಂಬಿಸಿ
ಭೂದೈವರಾರಾಧಿಸುತ ನೀ | ಸಂಪದಿಸು ಪರಮಸತ್ಕೀರ್ತಿ 2
ಶ್ರೀಮಧ್ವಮತವಲಂಬಿಸಿ | ಪಾಮರ ಮತವ ಧಿಕ್ಕರಿಸಿ |
ಶಾಮಸುಂದರನ ನೀ ಒಲಿಸಿ |
ಈ ಮಹೀಮಂಡಲದಿ ಸುಖಿಸು ಜೀವಿಸು 3
***