Showing posts with label ವಂದಿಸುವೆ ಗುರು ರಾಘವೇಂದ್ರಾರ್ಯರ jagannatha vittala VANDISUVE GURU RAGHAVENDRA RAYARA. Show all posts
Showing posts with label ವಂದಿಸುವೆ ಗುರು ರಾಘವೇಂದ್ರಾರ್ಯರ jagannatha vittala VANDISUVE GURU RAGHAVENDRA RAYARA. Show all posts

Saturday, 18 December 2021

ವಂದಿಸುವೆ ಗುರು ರಾಘವೇಂದ್ರಾರ್ಯರ ankita jagannatha vittala VANDISUVE GURU RAGHAVENDRA RAYARA

 ರಾಗ ಬಾಗೇಶ್ರೀ   ಖಂಡಛಾಪುತಾಳ 
1st Audio by Mrs. Nandini Sripad




ಶ್ರೀ ಜಗನ್ನಾಥದಾಸರ ಕೃತಿ 


ವಂದಿಸುವೆ ಗುರುರಾಘವೇಂದ್ರಾರ್ಯರಾ ।
ವೃಂದಾವನಕೆ ಪ್ರತಿಪ್ರತಿ ದಿನಗಳಲ್ಲಿ ॥ ಪ ॥

ಸುವಿರೋಧಿ ವತ್ಸರದಿ ಶ್ರಾವಣಪರ ದ್ವಿತೀಯ ।
ಕವಿವಾರ ತುಂಗಭದ್ರಾ ತೀರದಿ ॥
ನವಸುಮಂತ್ರಾಲಯದಿ ದೇಹ್ಯವನು ಬಿಟ್ಟು ಮಾ -।
ಧವನ ಪುರವೈದಿದ ಮಹಾತ್ಮರಿವರಹುದೆಂದು ॥ 1 ॥

ಸ್ವಪದಾವಲಂಬಿಗಳಿಗೆ ಉಪನಿಷತ್ ಖಂಡಾರ್ಥ ।
ಉಪದೇಶಗೈದು ಕಾಶ್ಯಪಿ ಸುರರನು ॥
ಪ್ರಪುನೀತರನು ಮಾಡಿ ಅಪವರ್ಗದವರೊಳಗೆ ।
ಉಪಮರಿಲ್ಲೆಂದುರುಪಿದ ಉಪಕಾರಿಗಳ ಕಂಡು ॥ 2 ॥

ದೇವತೆಗಳಿವರು ಸಂದೇಹ್ಯ ಬಡಸಲ್ಲ ವೃಂ -।
ದಾವನವ ರಚಿಸಿ ಪೂಜಿಪ ಭಕ್ತರ ॥
ಸೇವೆ ಕೈಕೊಂಡವರ ಮನೋರಥವ ಲ -।
ಕ್ಷ್ಮೀವರ ಜಗನ್ನಾಥವಿಠ್ಠಲಗೆ ಪ್ರಿಯರೆಂದು ॥ 3 ॥
***

Vandisuve gururagavendraryara || pa ||

Vrundavana pratikadi pratidivasagalali || a |

|suvirodhivatsara sravana paradvitiyakavivara tungabadratiradanavasumantralayadi
Dehavanu bittu madhavana purakaidida mahatmarivarendu || 1 ||

Svapadavalanbigaligupanishat kandartha^^upadesagaidu kasyapisuraranuprapunitaranu
Madi apavargamargavanu^^upadesisida parama upakarigala kandu || 2 ||

Devategalivaridake sandehavilla vrundavanava racisi pujipa baktaraseve kaikondu
Koduvaru manorathavalakshmivara jagannathaviththala priyarendu || 3 ||
***


ವಂದಿಸುವೆ ಗುರು ರಾಘವೇಂದ್ರಾರ್ಯರ|
ವೃಂದಾವನ ಪ್ರತೀಕಕೆ  ಪ್ರತಿ ದಿನ ದಿನಾ || ಪ. ||

ಸುವಿರೋಧಿ ವತ್ಸರದಿ ಶ್ರಾವಣ ಪರದ್ವಿತೀಯ|
ಕವಿವಾರ ತುಂಗಭದ್ರಾ ತೀರದಿ| 
ನವ ಸುಮಂತ್ರಾಲಯದಿ ದೇಹವನು ಬಿಟ್ಟು|  ಮಾ-
ಧವನ ಪುರಕೈದಿದ ಮಹಾತ್ಮರಿವರಹುದೆಂದು || ೧ ||

ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ
ಉಪದೇಶಗೈದು ಕಾಶ್ಯಸುರರನಾ|
ಪ್ರಪುನೀತರನು ಮಾಡಿ ಅಪವರ್ಗ ದಾಸರೊಳ್|
ಉಪಮರಿಲ್ಲೆಂದರುಪಿದುಪಕಾರಿಗಳ ಕಂಡು || ೨ ||

ದೇವತೆಗಳಿವರಿದಕೆ ಸಂದೇಹ ಬಡಸಲ್ಲ ವೃಂ
ದಾವನವ ರಚಿಸಿ| ಪೂಜಿಪ ಭಕ್ತರ|
ಸೇವೆ ಕೈ ಕೊಂಡವರ ಮನೋರಥವ ಸಲಿ
ಶ್ರೀ ವರ ಜಗನ್ನಾಥ ವಿಠಲ ಗತಿ ಪ್ರಿಯರೆಂದು || ೩ ||
********