Showing posts with label ಶರಣರ ಶರಣ್ಯ ನಾರಾಯಣ ವರ್ಮಾ uragadrivasa vittala SHARANARA SHARANYA NARAYANA VARMA. Show all posts
Showing posts with label ಶರಣರ ಶರಣ್ಯ ನಾರಾಯಣ ವರ್ಮಾ uragadrivasa vittala SHARANARA SHARANYA NARAYANA VARMA. Show all posts

Friday, 27 December 2019

ಶರಣರ ಶರಣ್ಯ ನಾರಾಯಣ ವರ್ಮಾ ankita uragadrivasa vittala SHARANARA SHARANYA NARAYANA VARMA

Audio by Mrs. Nandini Sripad

ಶ್ರೀ ಉರಗಾದ್ರಿವಾಸವಿಠಲದಾಸಾರ್ಯ ವಿರಚಿತ

ಶ್ರೀನಾರಾಯಣವರ್ಮ

 ರಾಗ ಸಾವೇರಿ             ರೂಪಕತಾಳ 

ಶರಣರ ಶರಣ್ಯ ನಾರಾಯಣ ॥ ಪ ॥
ಭಕುತರ ಸಂರಕ್ಷಣ ನಾರಾಯಣ ॥ ಅ ಪ ॥

ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ।
ಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನ ॥
ವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿ ।
ನಿಗಮವಿನುತ ಜಗದಾದಿ ವಂದ್ಯನೆ ದೇವಾ ॥ 1 ॥

ವರುಣಪಾಶಂಗಳಂ ಜಲಚರ ಜಂತುಗಳು ಮತ್ಸ್ಯ।
ಮೂರುತಿ ತಾ ರಕ್ಷಕನಾಗಿರಲಿ ॥
ಧಾರುಣಿ ನೆಲದೊಳು ಶ್ರೀವಾಮನ ಕಾಯಲಿ ।
ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ ॥ 2 ॥

ದುರ್ಗರಣಾಗ್ರವನ ಅರಿವರ್ಗಗಳಲಿ ।
ನರಹರಿದೇವ ಸಂರಕ್ಷಕನಾಗಿರಲಿ ॥
ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ।
ದುರ್ಗಮ ಶೈಲದೊಳು ಶ್ರೀಭಾರ್ಗವ ರಕ್ಷಿಸಲಿ ॥ 3 ॥

ದಾಶರಥಿ ಪ್ರವಾಸದಲಿ ನಿತ್ಯ ।
ದೇಶಾಂತರಗಳಲ್ಲಿದ್ದರು ಕಾಯಲಿ ।
ಈಶ ಶ್ರೀಮನ್ನಾರಾಯಣ ಎನ್ನ ॥
ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ।
ನರಾವತಾರ ಎನ್ನ ಗುರುವಿನಿಂ ರಕ್ಷಿಸಲಿ ॥ 4 ॥

ವಿರೋಧಿ ವರ್ಗದಿ ದತ್ತಾತ್ರೇಯ ಕಾಯಲಿ ।
ಸರ್ವ ಕರ್ಮ ಬಂಧ ಜ್ಞಾನದಿಂದ ಕಪಿಲಾ ॥
ಮೂರ್ತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕು- ।
ಮಾರನು ಎನ್ನ ಕಾಯಲಿ ಕಾಮದಲ್ಲಿ ॥ 5 ॥

ದಾನವ ಮಧುಕೈಟಭ ಹರಿ ಹಯವದನ ।
ಘನ್ನಪರಾಧದಿ ರಕ್ಷಕನಾಗಿರಲಿ ॥
ಮನ್ನಿಸಿ ದೇವತೆಗಳು ಸಾಧನವೀಯಲಿ ।
ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ।
ಎನ್ನ ರಕ್ಷಕನಾಗಿರಲಿ ರುಜೆಯೊಳು ॥ 6 ॥

ಜ್ಞಾನರೂಪಿ ಋಷಭ ಸೀತಾತಪದಿಂದ ಎ - ।
ನ್ನನುದಿನ ಈ ದ್ವಂದ್ವದಿ ಕಾಯಲಿ ॥
ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ।
ಸುಜ್ಞ ಬಲರಾಮನು ದುರ್ಜನರ ಭಯದಿಂ ।
ಅಜ್ಞಾನಿ ಎಂದೆನ್ನ ಅನುದಿನ ರಕ್ಷಿಸಲಿ ॥ 7 ॥

ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ।
ಜ್ಞಾನಧಾತೃ ಹರಿ ಸೇವೆಗೆ ಬರುತಿಹ ॥
ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ।
ಘನ್ನ ಮಹಾನರಕ ಬಾಧೆಯಿಂ ತಪ್ಪಿಸಲಿ ।
ಕೂರ್ಮ ಮೂರುತಿ ಕಾಪಾಡಲಿ ನಿತ್ಯ ॥ 8 ॥

ವೇದವ್ಯಾಸರು ಶುಧ್ಧ ಜ್ಞಾನವನೀಯಲಿ ।
ಬುದ್ಧಿಮೋಹದಿಂದ ಬುದ್ಧನುದ್ಧರಿಸಲಿ ॥
ಹೃದಯದ ಕಲಬಾಧೆ ಕಲ್ಕಿ ತಾ ಹರಿಸಲಿ ॥ 9 ॥

ಉದಯಕಾಲದಿ ಶ್ರೀಕೇಶವ ರಕ್ಷಿಸಲಿ ವೇಣು ।
ಹಸ್ತ ಗೋವಿಂದ ಸಂಗಮದಲ್ಲಿ ॥
ಪೂರ್ಣಕರುಣೆಯಿಂದ ಎನ್ನ ಕಾಪಾಡಲಿ ।
ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ ॥ 10 ॥

ವಿಷ್ಣುಮೂರುತಿ ಮಧ್ಯಾಹ್ನದಿ ಕಾಯಲಿ ।
ಮಾಧವ ಅಪರಾಹ್ನದಲೆನ್ನ ರಕ್ಷಿಸಲಿ ॥
ಮಧುಸೂದನ ಸಾಯಂಕಾಲದಿ ರಕ್ಷಿಸಲಿ ॥ 11 ॥

ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ।
ಪದುಮನಾಭಿ ಅರ್ಧರಾತ್ರಿಯೊಳು ಸಲಹಲಿ ॥
ಶ್ರೀಧರನೆನ್ನ ಅಪರಾತ್ರಿಯೊಳು ಸಲಹಲಿ ॥ 12 ॥

ಜನಾರ್ದನನು ಎನ್ನನು ಉಷಃಕಾಲದಲಿ ।
ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ॥
ಕಾಲನಾಮಕ ಬೆಳಗಿನ ಝಾವದಿ ಕಾಯಲಿ ॥ 13 ॥

ನಕ್ರನ ಹರಿಸಿದ ಚಕ್ರಾಯುಧವು ಎನ್ನ ।
ಶತ್ರುಬಾಧೆಗಳಿಂದ ರಕ್ಷಿಸುತಲಿರಲಿ ॥
ವಿಕ್ರಮ ಗದೆಯು ಆಶ್ರಿತರುಪದ್ರ - ।
ದುರಾಗ್ರಹ ನಿಗ್ರಹ ಮಾಡಲಿ ಅನುದಿನ ॥ 14 ॥

ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ।
ಪಾಂಚಜನ್ಯ ಶಂಖರಾಜ ರಕ್ಷಿಸಲಿ ॥
ದುಮ್ಮನ ಶತ್ರುಬಾಧೆಗಳಿಂದ ಖಡ್ಗವು ।
ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ ॥ 15 ॥

ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ।
ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ॥
ನಿವಾರಣೆಯಾಗಿ ನಿವೃತ್ತಿ ಮಾರ್ಗಕ್ಕೆ ಶುಧ್ಧ ।
ಭಾವ ಭಕುತಿಗೆ ಕಾರಣವು ಸತ್ಯ ।
ಗರುಡ ವಿಷ್ವಕ್ಸೇನ ಕಷ್ಟದಿಂದ ರಕ್ಷಿಸಲಿ ॥ 16 ॥

ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ।
ಸರ್ವರಂತರ್ಯಾಮಿ ನಿನ್ನ ನಂಬಿರಲು ॥
ಸರ್ವಬಾಧೆಗಳಲ್ಲಿ ಪರಿಹಾರವಾಗಲಿ ॥ 17 ॥

ಸರ್ವದೇಶ ಕಾಲ ಸರ್ವಾವಸ್ಥೆಯೊಳೆನ್ನ ।
ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ॥
ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ।
ಕರುಣ ಕವಚವೂ ಎನಗಿರಲನುದಿನ ॥ 18 ॥

ಬಹಿರಾಂತರದಿ ಮೇಲೆ ಕೆಳಗು ।
ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ॥
ನಿರುತ ರಕ್ಷಕ ನರಹರಿಯೆ ।
ನೀ ಪೊರೆ ಶ್ರೀವೇಂಕಟೇಶಾಭಿನ್ನ ।
ಉರಗಾದ್ರಿವಾಸವಿಠ್ಠಲ ಸ್ವಾಮಿ ॥ 19 ॥
************


ಶ್ರೀ ಉರಗಾದ್ರಿವಿಠಲ ದಾಸರ ವಿರಚಿತ
{ಶ್ರೀ. ಎಂ. ಶ್ರೀನಿವಾಸ ರಾವ್}
ಶ್ರೀ ನಾರಾಯಣವರ್ಮ  ರಾಗ ಸಾವೇರಿ 

ಶರಣರ ಶರಣ್ಯ ನಾರಾಯಣ| 
ಭಕುತರ ಸಂರಕ್ಷಣಾ ನಾರಾಯಣ || ಪ. ||

ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ
ಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನ
ವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿ
ನಿಗಮವಿನುತ ಜಗದಾದಿ ವಂದ್ಯನೆ ದೇವಾ || 1 ||

ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯ
ಮೂರುತಿ ತಾ ರಕ್ಷಕನಾಗಿರಲಿ
ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ
ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || 2 ||

ದುರ್ಗರಣಾಗ್ರವನ ಅರಿವರ್ಗಗಳಲಿ
ನರಹರಿದೇವ ಸಂರಕ್ಷಕನಾಗಿರಲಿ
ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ
ದುರ್ಗಮ ಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ || 3 ||

ದಾಶರಥಿ ಪ್ರವಾಸದಲಿ ನಿತ್ಯ
ದೇಶಾಂತರಗಳಲ್ಲಿದ್ದರು ಕಾಯಲಿ
ಈಶ ಶ್ರೀಮನ್ನಾರಾಯಣ ಎನ್ನ
ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ
ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ || 4 ||

ವಿರೋಧಿ ವರ್ಗದಿ ದತ್ತಾತ್ರೇಯ ಕಾಯಲಿ
ಸರ್ವ ಕರ್ಮ ಬಂಧ ಜ್ಞಾನದಿಂದ ಕಪಿಲಾ
ಮೂರ್ತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕು-
ಮಾರನು ಎನ್ನ ಕಾಯಲಿ ಕಾಮದಲ್ಲಿ || 5 ||

ದಾನವ ಮಧುಕೈಟಭ ಹರಿ ಹಯವದನ
ಘನ್ನಪರಾಧದಿ ರಕ್ಷಕನಾಗಿರಲಿ
ಮನ್ನಿಸಿ ದೇವತೆಗಳು ಸಾಧನವೀಯಲಿ
ಸನ್ನುತಾಂಗ ಧನ್ವಂತ್ರಿಮೂರುತಿ ಹರಿ
ಎನ್ನ ರಕ್ಷಕನಾಗಿರಲಿ ರುಜೆಯೊಳು || 6 ||

ಜ್ಞಾನರೂಪಿ ಋಷಭ ಸೀತಾತಪದಿಂದ ಎ-
ನ್ನನುದಿನ ಈ ದ್ವಂದ್ವದಿ ಕಾಯಲಿ
ಯಜ್ಞಮೂರುತಿ ಲೋಕಾಪವಾದದಿ ಕಾಯಲಿ
ಸುಜ್ಞ ಬಲರಾಮನು ದುರ್ಜನರ ಭಯದಿಂ
ಅಜ್ಞಾನಿಯೆಂದೆನ್ನ ಅನುದಿನ ರಕ್ಷಿಸಲಿ || 7 ||

ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ
ಜ್ಞಾನದಾತೃ ಹರಿಸೇವೆಗೆ ಬರುತಿಹ 
ನಾನಾ ವಿಘ್ನಗಳಿಂದ ರಕ್ಷಿಸುತಿರಲಿ 
ಘನ್ನ ಮಹಾ ನರಕ ಬಾಧೆಯಿಂ ತಪ್ಪಿಸಲಿ 
ಕೂರ್ಮ ಮೂರುತಿ ಕಾಪಾಡಲಿ ನಿತ್ಯ || 8 ||

ವೇದವ್ಯಾಸರು ಶುಧ್ಧ ಜ್ಞಾನವನೀಯಲಿ
ಬುದ್ಧಿಮೋಹದಿಂದ ಬುದ್ಧನುದ್ಧರಿಸಲಿ
ಹೃದಯದ ಕಲಬಾಧೆ ಕಲ್ಕಿ ತಾ ಹರಿಸಲಿ || 9 ||

ಉದಯಕಾಲದಿ ಶ್ರೀಕೇಶವ ರಕ್ಷಿಸಲಿ | ವೇಣು
ಹಸ್ತ ಗೋವಿಂದ ಸಂಗಮದಲ್ಲಿ | 
ಪೂರ್ಣ ಕರುಣೆಯಿಂದ ಎನ್ನ ಕಾಪಾಡಲಿ 
ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ || 10 ||

ವಿಷ್ಣುಮೂರುತಿ ಮಧ್ಯಾಹ್ನದಿ ಕಾಯಲಿ 
ಮಾಧವ ಅಪರಾಹ್ನದಲೆನ್ನ ರಕ್ಷಿಸಲಿ 
ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ || 11 ||

ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ
ಪದುಮನಾಭಿ ಅರ್ಧರಾತ್ರಿಯೊಳು ಸಲಹಲಿ
ಶ್ರೀಧರನೆನ್ನ ಅಪರಾತ್ರಿಯೊಳು ಸಲಹಲಿ || 12 ||

ಜನಾರ್ಧನನು ಎನ್ನನು ಉಷಃಕಾಲದಲಿ
ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ
ಕಾಲನಾಮಕ ಬೆಳಗಿನ ಝಾವದಿ ಕಾಯಲಿ || 13 ||

ನಕ್ರನ ಹರಿಸಿದ ಚಕ್ರಾಯುಧವು ಎನ್ನ
ಶತ್ರುಬಾಧೆಗಳಿಂದ ರಕ್ಷಿಸುತಿರಲಿ
ವಿಕ್ರಮ ಗದೆಯು ಆಶ್ರಿತರುಪದ್ರ -
ದುರಾಗ್ರಹ ನಿಗ್ರಹ ಮಾಡಲಿ ಅನುದಿನ || 14 ||

ಪ್ರಮಥ ಭೂತ ಪಿಶಾಚ ಪ್ರೇತ ಭಯದಿ
ಪಾಂಚಜನ್ಯ ಶಂಖರಾಜ ರಕ್ಷಿಸಲಿ
ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು
ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ || 15 ||

ಅವನ ನಾಮರೂಪ ದಿವ್ಯಾಯುಧದ ಸ್ಮರಣೆ
ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ 
ನಿವಾರಣೆಯಾಗಿ ನಿವೃತ್ತಿ ಮಾರ್ಗಕ್ಕೆ ಶುಧ್ಧ 
ಭಾವ ಭಕುತಿಗೆ ಕಾರಣವು ಸತ್ಯ
ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ || 16 ||

ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ
ಸರ್ವರಂತರ್ಯಾಮಿ ನಿನ್ನ ನಂಬಿರಲು
ಸರ್ವ ಬಾಧೆಗಳಲ್ಲಿ ಪರಿಹಾರವಾಗಲಿ || 17 ||

ಸರ್ವದೇಶ ಕಾಲ ಸರ್ವಾವಸ್ಥೆಯೊಳೆನ್ನ
ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ
ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ
ಕರುಣ ಕವಚವು ಎನಗಿರಲನುದಿನ || 18 ||

ಬಹಿರಾಂತರದಿ ಮೇಲೆ ಕೆಳಗು 
ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು
ನಿರುತ ರಕ್ಷಕ ನರಹರಿಯೆ 
ನೀ ಪೊರೆ ಶ್ರೀ ವೇಂಕಟೇಶಾಭಿನ್ನ 
ಉರಗಾದ್ರಿವಾಸವಿಠಲ ಸ್ವಾಮಿ || 19 ||
********