Showing posts with label ಕಾಯೋ ಎನ್ನ ಶ್ರೀಧವ ಕರುಣಾಕರ raghupati vittala. Show all posts
Showing posts with label ಕಾಯೋ ಎನ್ನ ಶ್ರೀಧವ ಕರುಣಾಕರ raghupati vittala. Show all posts

Sunday, 3 October 2021

ಕಾಯೋ ಎನ್ನ ಶ್ರೀಧವ ಕರುಣಾಕರ ankita raghupati vittala

 ರಾಗ - : ತಾಳ -


ಕಾಯೋ ಎನ್ನ ಶ್ರೀಧವ ಕರುಣಾಕರ l

ಕಾಯೋ ಎನ್ನ ಭೂಧರ ವರ ಶುಭಕರ ll ಪ ll


ಕಂದಧ್ರುವನಿಗೊಲಿದು ಸ್ಥಿರ ಪದವಿಯನಿತ್ತಿ l

ಚಂದದಿ ಪವಮಾನಗೆ ಅಜಪದವಿತ್ತಿ l

ಅಂದು ಅಜಾಮಿಳಗೊಲಿದ ತೆರದಿ ನಿನ್ನ l

ಕಂದನೆಂದು ತಿಳಿದೆಂದಿಗೂ ಬಿಡದಲೆ ll 1 ll


ಕರಿರಾಜನನು ಮಕರಿ ಕಾಲ್ಹಿಡಿಯಲು l

ಭರದಿಂದ್ವದಗಿ ಮಕರಿಯ ಛೇದಿಸಿದಿ  l

ಚಿರವಸ್ತ್ರವ ನಿತ್ತು ತರುಣಿಯ ಗೆಲಿಸಿದಿ l

ಪರಮ ಕರುಣಿ ಸುರವರ ಸಂಸೇವಿತ ll 2 ll


ಸೇವಕ ನಾನು ನಿಮ್ಮೂಳಿಗದವನೆಲೊ l

ಸೇವಿಸೆ ತವ ಚರಣಾರವಿಂದಗಳ l

ಭೂವರಾಹ ರಘುಪತಿವಿಟ್ಠಲ ನಿನ್ನ l

ಝಾವಕೆ ಭಜಿಸುವೆ ನವವಿಧ ಭಕುತಿಲಿ ll 3 ll

***