..
ನಿನಗೇನೊ ಭಕುತರ ಚಿಂತೀ
ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ
ಶಿರಿದೇವಿ ನಿನರಾಣಿ ಪರಮೇಷ್ಟಿ ನಿನಪುತ್ರ
ಕಿರಿಯ ಮಗನು ಜಗತ್ಪ್ರಾಣದೇವಾ
ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ
ಪುರಹರನು ಮೊಮ್ಮಗನು ಸುರರು ಪರಿವಾರ 1
ಸಕಲಲೋಕಕೆ ಅರಸು ಲಕುಮಿಕಾಂತನು ಎಂದು
ನಿಖಿಳವೇದ ಸ್ಮøತಿಯು ಸಾರುತಿಹದೋ
ಅಖಿಳವ್ಯಾಪಕನಾಗಿ ಸಕಲಸುರನರರಿಂದ
ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2
ಸುರನಾಥ ನೀನಲ್ಲದಿತರ ದೇವತೆಯುಂಟೆ
ಸರವೋತ್ತಮಾನೆಂಬನಾವನವನೋ
ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ
ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
***