ಕಾಖಂಡಕಿ ಶ್ರೀ ಕೃಷ್ಣದಾಸರು
ಇಷ್ಟಲಿಂಗಾರ್ಚನವಾ | ಮಾಡುವರಾ | ಎಷ್ಟೆಂದ್ಹೇಳಲಿ ಭಾಗ್ಯವಾ | ಕಟ್ಟಿ ಉಡಲಾಗದೇನಟ್ಟುತ್ತ ಮಾಂಗದಿ | ಕಟ್ಟಲಿಲ್ಲದ ತೇಂಜಾಂಗುಷ್ಟದ ಲಿಪ್ಪಾ ಪ
ಹೃದಯವೇ ಮಂದಿರವು | ಅಷ್ಟದಳ | ಪದುಮವೇ ಮಂಟಪವು | ವದಗಿ ಮರುಹು ಎಂಬುವದೇ ನಿರ್ಮಾಲ್ಯವ ಬಿಟ್ಟು | ಸದಮಲ ಅರುಹಿನಾ ಉದಕದ ಮಜ್ಜನದೀ 1
ಶ್ರೀ ವಿಭೂತಿಯ ನಿಟ್ಟು | ಭಾವಗಂಧ ಭಕ್ತೀವ ತಿಲಾಕ್ಷತೆ | ಸಾವಧಾನದಿ ತ್ರಿಗುಣವೇ ತ್ರಿದಳ ಬಿಲ್ವದಿ 2
ಪುಣ್ಯಗಂಧವೇ ಧೂಪವು ಸುಜ್ಞಾನದ | ರನ್ನ ಜೋತಿಯ ದೀಪವು | ತನ್ನನುಭವ ಸಂಪನ್ನ ನೈವೇದ್ಯವು | ಮುನ್ನೆ ತಾಂಬೋಲವಾನನ್ಯ ಚಿಂತನೆಯಂಬಾದಿ 3
ಕರಣ ದಾರತಿಗಳನ್ನು | ಬೆಳಗುವಾ | ಪರಿಚಾರ ಪ್ರಾಣಗಳು | ಸ್ಪುರಿತ ನಾಹತದ ವರವಾದ್ಯ ಘೋಷವು | ಪರಿಪರಿಯಾದ ಝೆಂಕರಿಸುವ - ರವದಿಂದಾ 4
ವೃಂದದಿ ಷಡ್ಡಸ್ಥಳದೀ ನುಡಿವ ಮಂತ್ರ | ವೆಂದು ಅಜಪ ಸೂತ್ರದೀ | ತಂದೆ ಮಹಿಪತಿ ನಂದನ ಪ್ರಭು ನಮೋ | ಯಂದು ನಿಷ್ಕಾವ್ಯದಾದ ಸಂದಿ ಸುಖಸುತ 5
***