Showing posts with label ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ narahari P. Show all posts
Showing posts with label ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ narahari P. Show all posts

Thursday, 5 August 2021

ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ
ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ಪ

ಇಲ್ಲಿ ಯಾರಿಲ್ಲೆಂದು ಮೆಲ್ಲನೆ ಪರಸತಿಯ
ಕಳ್ಳತನದಲಿ ಕೂಡಿ ಸುಳ್ಳು ಹೇಳಿ
ಎಲ್ಲ ಕಡಿ ದಿಗ್ದೇವ ತತ್ವೇಶರಲ್ಲಿರುವ
ಪುಲ್ಲನಾಭನೆ ನಿನ್ನ ವ್ಯಾಪಾರವರಿಯೆ 1

ಅರುಣನುದಯದಲೆದ್ದು ಪರರ ವಂಚನೆಗಾಗಿ
ಹರಿವೊ ಜಲದಲಿ ಮುಳುಗಿ ಬೆರಳೆಣಿಸಿ
ಅರಿಯದೆ ದ್ರವರೂಪ ಮನರೂಪ ಮೊದಲಾದ್ದು
ಅರಿಷಟ್ಕರಿಂದ ಪರರೊಡವಿಯನು ಬಯಸುವೆನು 2

ಅಂಗಡಿಯ ತೆರದಿ ನಾನ್ಹಿಂಡುಗೊಂಬೆಗಳ್ಹೂಡಿ
ಅಂಗ ಚಲಿಸದೆ ಮೂಗು ಹಿಂಡುತಲೆ ಕುಳಿತು
ಅಂಗಜ ಜನಕ ಶ್ರೀ ನರಹರಿಯ ಧ್ಯಾನಿಸದೆ
ಭಂಗಕೆ ಗುರಿಮಾಳ್ವ ಮಣ್ಣು ಚಿಂತೆಪೆನೊ 3
***