Showing posts with label ಪಾಲಿಸೆನ್ನ ಮಂದಬಾಲಿಶನ್ನಪಾಲಗಡ prasannavenkata. Show all posts
Showing posts with label ಪಾಲಿಸೆನ್ನ ಮಂದಬಾಲಿಶನ್ನಪಾಲಗಡ prasannavenkata. Show all posts

Wednesday, 13 November 2019

ಪಾಲಿಸೆನ್ನ ಮಂದಬಾಲಿಶನ್ನಪಾಲಗಡ ankita prasannavenkata

by ಪ್ರಸನ್ನವೆಂಕಟದಾಸರು
ಪಾಲಿಸೆನ್ನ ಮಂದಬಾಲಿಶನ್ನಪಾಲಗಡಲೊಡೆಯ ಸಿರಿಲೋಲ ಪ.

ಅಂಬುರುಹಸಂಭವ ತ್ರಿಯಂಬಕ ಶೇಷಾಂಬರಗದಂಭೋಳಿಸಂಭೃತನುತಾಂಘ್ರಿ 1

ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ 2

ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿನಗನಿಲಯ ಜಘನಕಟಿಪಾಣಿ 3

ಕಿರೀಟ ಕುಂಡಲರಿದರಕೇಯೂರಕೌಸ್ತುಭಸಿರಿವತ್ಸವರಾಂಬರ ಮನೋಹರ ಮೇಖಲಧಾರಿ 4

ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋದ್ಧವಾಕ್ರೂರ ಮುಖ್ಯವಮಾನಹಾರಿ 5

ಋಗ್ಯಜುಸಾಮನಿಗಮಧರವಗೋಚರ ಮುನಿಗಣ ಸುಮನಗೇಹನಂತ ಸುಗುಣಾನಂದ ಪೂರ್ಣ 6

ಮಧು ಕೈಟಭ ಮದನೇಮಿ ಜಲಂಧರಕಂಬುಸದನಖಳಾಬುಧಿ ಕುಲಾಂತಕ ದ್ವಿಜೋಪಕಾರಿ 7

ಋಷಿ ಹನುಮ ರಸಗಾಯನ ತೋಷಭರಿತ ಹಾಸವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ 8
*********