Showing posts with label ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ gurujagannatha vittala. Show all posts
Showing posts with label ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ gurujagannatha vittala. Show all posts

Friday, 27 December 2019

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ankita gurujagannatha vittala

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ
ನಂಬದೆ ಕೆಡುವುರುಂಟೋ ||pa||

ನಂಬಿದ ಜನರಿಗೆ – ಬೆಂಬಲ ತಾನಾಗಿ
ಹಂಬಲಿಸಿದ ಫಲ – ತುಂಬಿ ಕೊಡುವರನ್ನ ||a.pa||

ಜಲಧರ ದ್ವಿಜವರಗೆ ತಾನೇ ಒಲಿದು
ಸುಲಭದಿ ಮುಕುತಿಯನಿತ್ತ
ಚಲುವ ಸುತನ ಪಡೆದಲಲನೆಗೆ ತ್ವರದಿಂದ
ಪುಲಿನ ಗರ್ತದಿ ದಿವ್ಯ – ಜಲವ ನಿತ್ತವರನ್ನ ||1||

ಮೃತ್ಯುದೂತರು ತನ್ನನು ಪೊಂದಿದ ನಿಜ
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು – ಮತ್ತು ಧsರೆಗೆ ತಂದು
ಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹರನ್ನಾ ||2||

ಧಿಟ ಗುರುಜಗನ್ನಾಥ ವಿಠಲನೊಲಿಮೆ
ಘಟನವಾದುದರಿಂದ
ಘಟನಾಘಟನ ಕಾರ್ಯ – ಘಟನಾ ಮಾಡುವ ನಮ್ಮ
ಪಟು ಗುರುವರ ಹೃ – ತ್ಪುಟ ದಿರುವೋರನ್ನ ||3||
****

ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ
ನಂಬದೆ ಕೆಡುವುರುಂಟೋ | ಪ |
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರನ್ನ | ಅ ಪ|

ಜಲಧರ ದ್ವಿಜವರಗೆ ತಾನೇ ಒಲಿದು
ಸುಲಭದಿ ಮುಕುತಿಯನಿತ್ತ
ಚಲುವ ಸುತನ ಪಡೆದಲಲನೆಗೆ ತ್ವರದಿಂದ
ಪುಲಿನ ಗರ್ತದಿ ದಿವ್ಯ  ಜಲವ ನಿತ್ತವರನ್ನ | 1 |

ಮೃತ್ಯುದೂತರು ತನ್ನನು ಪೊಂದಿದ ನಿಜ
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು  ಮತ್ತು ಧsರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ | 2 |

ಧಿಟ ಗುರುಜಗನ್ನಾಥ ವಿಠಲನೊಲಿಮೆ
ಘಟನವಾದುದರಿಂದ
ಘಟನಾಘಟನ ಕಾರ್ಯ  ಘಟನಾ ಮಾಡುವ ನಮ್ಮ
ಪಟು ಗುರುವರ ಹೃತ್ಪುಟದಿರುವೋರನ್ನ |‌ 3‌ |
*****