..
ಶ್ರೀವರದ ವಿಠಲರ ಹಾಡು
ದೋಷರಾಶಿಯ ಕಳೆದು ಪಾಲಿಸುವದು |ಶ್ರೀಶ ಪ್ರಾಣೇಶ ದಾಸಾರ್ಯನೇ ಒಲಿದು ಪ
ಹರಷಮುನಿ ಮತ ತತ್ವಪರಮ ಹರುಷದಲಿಂದ |ಗರೆದು ಸುಜನರಿಗೆ ಸರಿಮಾರ್ಗತೋರಿ ||ಸಿರಿರಾಮನಾಮದ ಸವಿಯನುಣಬಡಿಸಿದೆ |ಕರಪಿಡಿದು ರಕ್ಷಿಪ ಭಾರ ನಿನ್ನದುಯೆಂದೆ 1
ದಾಸಕುಲರತ್ನ ಗುರು ಪ್ರಾಣೇಶದಾಸರಲಿ |ವಾಸುದೇವನ ಸ್ಥಿರದಾಸ್ಯ ಪಡೆದು ||ಶ್ರೀಶ ಪ್ರಾಣೇಶ ವಿಠಲನ ಕುಣಿಸಿದ ಧೀರ |ಆಶಪಾಶವ ಬಿಡಿಸು ಎಂದು ನಾ ಬಂದೆ 2
ನಂದ ವತ್ಸರದ ಭಾದ್ರಪದ ಮಾಸದಲ್ಲಿ |ಚಂದ್ರಪಕ್ಷವು ಅಷ್ಟಮಿ ತಿಥಿ ಭೌಮ್ಯದಿನದಿ ||ಮುಂದ ಕಾಲದಿ ನರಹರಿಯ ಧೇನಿಸಿ ನಲಿದು |ಇಂದಿರಾಧವ ವರದ ವಿಠಲನೂರಿಗೆ ನಡೆದೆ 3
***