Showing posts with label ನರಸಿಂಹನ ಪಾದ ಭಜನೆಯ ಮಾಡೋ purandara vittala NARASIMHANA PAADA BHAJANEYA MAADO. Show all posts
Showing posts with label ನರಸಿಂಹನ ಪಾದ ಭಜನೆಯ ಮಾಡೋ purandara vittala NARASIMHANA PAADA BHAJANEYA MAADO. Show all posts

Wednesday, 1 December 2021

ನರಸಿಂಹನ ಪಾದ ಭಜನೆಯ ಮಾಡೋ purandara vittala NARASIMHANA PAADA BHAJANEYA MAADO







ನರಸಿಂಹನ ಪಾದಭಜನೆಯ ಮಾಡೋ ||ಪ||

ನರಸಿಂಹನ ಪಾದಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||

ತರಳನ ಮೊರೆ ಕೇಳಿ
ತ್ವರಿತದಲಿ ಬಂದು
ದುರುಳನ ಕರುಳ ತನ್ನ
ಕೊರಳಲ್ಲಿ ಧರಿಸಿದ ||

ಸುರರೆಲ್ಲ ನಡುಗಲು
ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ
ಸಿರಿ ನರಹರಿ ನಮ್ಮ ||

ಹರಿವಿರಿಂಚಾರಾದ್ಯರು
ಕರವೆತ್ತಿ ಮುಗಿಯಲು
ಪರಮಶಾಂತನಾದ ಶ್ರೀ
ಪುರಂದರವಿಠಲ ||
****

ರಾಗ ಶಂಕರಾಭರಣ , ಆದಿತಾಳ (raga tala may differ in audio)

Narasimhana paada bhajaneya maadalu
Duritha parvathava khandi suva kulisadanthe||

Tharalana morekeli thvaritha dindali bandu
Durulana karula thanna koralalli dharisida||1||

Suralella nadugalu siridevi moreyide!
Varakambha dindabanda sirinarahari namma||2||

Hara virinchyadaru karavetthi mugiyalu
Paramasaanthanaada sree purandara vitala ||3||
***

pallavi

narasimhana pAda bhajaneya mADo

anupallavi

narasimhana pAda bhajaneya mADalu durita parvatava khaNDisuva kulishadante

caraNam 1

taruLana more kELi tvaritadindali bandu duruLana karuLa tanna koraLali dharisida

caraNam 2

surarella naDugalu siridEvi moreyiDe vara kambhadim banda siri narahai namma

caraNam 3

hari virincAdyaru karavetti mugiyalu parama shAntanAda shrI purandara viTTala
***

ನರಸಿಂಹನ ಪಾದ ಭಜನೆಯ ಮಾಡೋ          ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ      ||ಅ.ಪ||

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ

ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ         ||೧||

ತರಳನ ಮೊರೆ ಕೇಳಿ ತ್ವರಿತದಲಿ ಬಂದು

ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ        ||೨||

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು

ಪರಮ ಶಾಂತನಾದ ಪುರಂದರವಿಠಲ             ||೩||
****