Showing posts with label ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆ prasannavenkata. Show all posts
Showing posts with label ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆ prasannavenkata. Show all posts

Monday 11 November 2019

ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆ ankita prasannavenkata

by ಪ್ರಸನ್ನವೆಂಕಟದಾಸರು
ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆ ಕಂತುಶರದ ಬಲ ಕಡುವೇಗವಾಯಿತಲೆಕಾಂತ ಮೂರುತಿಯ ಕರೆತಾರೆ ತಾಯೆ ಪ.

ಸೀತಕರನ ಪ್ರಭೆಯು ಶುಕದುಂಬಿಗಳ ರವವುಸೋತಬಾಲೆಯ ಮುಂದೆ ಸರಸವೆ ಸೊಗಸೋದೆನೀತವೇನೆಲೆ ತಂಗಿ ನೀರಜನಾಭಗೆ 1

ನೀರೊಳು ಕರೆದೆನ್ನನೀಲಜೀಮೂತವರ್ಣನೀರಜದ್ವಕ್ತ್ತ್ರವ ನಖದಿಘಾಸಿಮಾಡುವನಾರಾಯಣನೆನ್ನ ಸುಳಿದರಿನ್ನೇನೆ 2

ಅಧರದೊಳಿಟ್ಟುಕೊಳಲು ಅತಿಮೋಹಿಸುವ ನಲ್ಲಯದುಕುಲದರಸ ಮೆಚ್ಚೆ ಎನ್ನೊಳು ಘನ್ನಮಧುಪಕುಂತಳ್ಯಾವಳೊ ಮನೆಗೊಯ್ದಳೊ 3

ಆವಗವನಕೇಳಿಆಡುವವನ ಸಾಲಿದಾವಸುಕೃತದಿಂದ ದೊರೆತನೊ ಶ್ರೀಮುಕುಂದಆವ ದುಷ್ಕøತ ಬಂದು ಅಗಲಿಸಿತಿಂದು 4

ಚಂಪಕದಲರ್ಮಾಲೆ ಚಂದನದ ಲೇಪ ಒಲ್ಲೆಕಂಪಿನೊಳಗೆನಿಂದುತಕ್ರ್ಕೈಸುವಾನಂದಸಂಪನ್ನ ತಾ ಬಂದು ಸಲಹುವನೆಂದೆ 5

ಪರಿಯಂಕದಲಿ ಕುಳಿತು ಪರಿಪರಿಯ ಸುಖವಿತ್ತುಕರದಿ ಕಂಕಣವಿಟ್ಟು ಕಡÉಯ ಪೆಂಡ್ಯಾ ಕೊಟ್ಟುಕರುಣಿಜರಿದುತರವೆ ತನಗಿದು6

ಇಂದಿರೆರಮಣ ಎನ್ನ ಇಚÉ್ಭಯಸುರಧೇನುಸುಂದರ ರನ್ನ ಪ್ರಸನ್ನ ವೆಂಕಟೇಶನಸಂದೇಹವಿಲ್ಲದೆ ಶರಣು ಹೊಂದಿದೆನೊ 7
********