Check same Devaranama by Kanaka Dasaru
ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||ಪ ||
ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ ||
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ, ದೊಡ್ಡ
ಮಲ್ಲರೊಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ, ಸಿರಿ
ವಲ್ಲಭನ ಧ್ಯಾನವು ಮುಕ್ತಿಗಾಗಿ ||
ದೊರೆತನ ಮಾಡುವುದು ಹೊಟ್ಟೆಗಾಗಿ, ಕರಿ
ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ, ಸಿರಿ
ಹರಿಯ ಭಜಿಸುವುದು ಮುಕ್ತಿಗಾಗಿ ||
ಬೆಟ್ಟವ ಹೊರುವುದು ಹೊಟ್ಟೆಗಾಗಿ
ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟ್ಟವಾಗಿ ನಮ್ಮ ಶ್ರೀಪುರಂದರ-
ವಿಟ್ಠಲನ್ನ ಧ್ಯಾನವು ಮುಕ್ತಿಗಾಗಿ ||
****
ರಾಗ ಹುಸೇನಿ. ಆದಿ ತಾಳ
pallavi
ellaru mADuvudu hoTTagAgi gENu baTTekAgi
anupallavi
siri vallabhana bhajisuvudu muttigAgi
caraNam 1
pallakkiya hOruvudu hoTTegAgi doDDa mallaroDanADuvudu hoTTegAgi
suLLAgi pogaLuvudu hoTTegAgi siri vallabhana dhyAnavu mukyigAgi
caraNam 2
doretana mADuvudu hoTTegAgi kari dUragavEruvudu hoTTegAgi
duritava mADuvudu hoTTegAgi siri hariya bhajisuvudu muktigAgi
caraNam 3
beTTava horuvudu hoTTegAgi gaTyAgi kUguvudu hoTTegAgi
diTTavAgi namma shrI purandara viTTalanna dhyAnavu muktigAgi
***