Showing posts with label ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ indiresha. Show all posts
Showing posts with label ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ indiresha. Show all posts

Friday, 27 December 2019

ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ ankita indiresha

ತೋಡಿ ರಾಗ ಅಷ್ಟತಾಳ

ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ ಕರ್ತುವಿಲ್ಲವೈ
ಮಮತೆಯಿಂದ ಮಗುವ ತಾಯಿ ಪೊರೆಯದಿರಲು ಮತ್ತೆ ಪೊರೆವರಾರೈ ಓ ಕೇಶವ ||ಪ||

ಪಂಚಭೂತಗಳ ಸಂಚಿತದ ದೇಹವು ವಂಚಿಪುದೈ ಕೇಶವ
ಸಂಚಿತದ ವಸ್ತುವು ಕೊಂಚವಾದರೂ ಎನ್ನ ಹೊಂಚಿ ಈಗ ನೋಡದೈ ಓ ಕೇಶವ ||೨||

ಹೆಂಡತಿಯು ಮಕ್ಕಳು ಹಿಂಡುಗೂಡಿ ಬಂದು ದಂಡಿಪರೈ ಕೇಶವ
ಕಂಡವರೊಂದಾಗಿ ಕಾಣದೆ ಎಂದಡೆ ಗೈದದೆ ಪೋಪರೈ ಓ ಕೇಶವ ||೨||

ಕಾಲನ ದೂತರು ಎನ್ನ ಕಾಲುಗಳನು ಕಟ್ಟಿ ಬಾಳಿಸರೈ ಕೇಶವ
ಲೀಲೆಯಿಂದಲಿ ವೈಕುಂಠ ನಗರದೊಳಿರ್ಪ ಇಂದಿರೇಶನೆ ಪಾಲಿಸೈ ಓ ಕೇಶವ ||೩||
********