ಮಂಗಳವೆನ್ನಿ ಮಾಲಕ್ಷುಮಿಗೀಗ ಶ್ರೀ-
ರಂಗನರಸಿ ರಮಾದೇವಿಗೆ ಬ್ಯಾಗ ಪ
ಸಿಂಧುನಂದನೆ ನಂದನಂದನನೆದೆಯಲ್ಲಿ
ಹೊಂದಿಕೊಂಡಿರುವಂಥ ಸುಂದರ ಸಿರಿಗೆ 1
ವರಮಣಿ ವೈಜಯಂತಿ ಹರಿಯ ಶ್ರೀವತ್ಸದಲ್ಲಿ
ಸರಸವಾಗಿರುವಂಥ ವರಮಹಾಲಕ್ಷುಮಿಗೆ 2
ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ
ಅರಳು ಮಲ್ಲಿಗೆಮೊಗ್ಗು ವರವ ಕೊಡೆನಗೆ 3
ರಂಗನರಸಿ ಬೆಳ್ಳಿ ಬಂಗಾರವೆನಗಿತ್ತು
ಕಂಗಳಿಂದಲಿ ನೋಡಿ ಮಂಗಳ ನೀಡೆ 4
ಆದಿನಾರಾಯಣನಾನಂತಗುಣ ಪರಿಪೂರ್ಣ-
ನಾದ ಭೀಮೇಶಕೃಷ್ಣನರಸಿ ಲಕ್ಷುಮಿಗೆ5
***