ನೋಡೆ ಗೋಪ್ಯಮ್ಮ ಕೃಷ್ಣಂಚಾಳಿಯ ನೀ
ಮಾಡಿಬಿಟ್ಟಿಯೆ ಇಂಥ ಗೂಳಿಯ ಇಂಥ ಧಾಳಿಯ ಪ
ಹಾಲು ಮೊಸರ ಕೆನೆ ಬೇಡುವ ಕಡ-
ಗೋಲಿಂದ್ಹೊಡೆದು ನಮ್ಮನ್ನೋಡುವ ಬಂದು ಕಾಡುವ1
ತುಪ್ಪದ ಕೊಡ ಧಪ್ಪನೊಡೆದಾನೆ ಕಂ-
ದರ್ಪನಪ್ಪನು ಈತೇನ್ಹುಡುಗನೆ ಇಂಥ ತುಡುಗನೆ 2
ಕರೆದು ಕೈಯಲಿ ಬೆಣ್ಣೆಯ ಮುದ್ದೆ ನೀ
ಕೊಟ್ಟೆ ್ಹೀಳೆ ಭೀಮೇಶ ಕೃಷ್ಣಗೆ ಬುದ್ಧಿ 3
***