ಪುರಂದರದಾಸರು
ರಾಗ ಕಾಮವರ್ಧನಿ/ಪಂತುವರಾಳಿ ಆಟತಾಳ
ವ್ಯಾಪಾರ ನಮಗಾಯಿತು
ಶ್ರೀಪತಿಪಾದಾರವಿಂದ ಸೇವೆಯೆಂಬೊ ||ಪ||
ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು
ಹರಿದಾಸರ ದಯವೆಂಬೊ ವಲ್ಲಿ
ಪರಮ ಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ
ದುರಾತ್ಮರಾದವರ ಎದೆ ಮೇಲೆ ನಡೆವಂಥ ||
ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿ
ನಾಲಿಗೆ ಎಂಬೋದು ಲೇಖಣಿಕೆಯು
ಶ್ರೀಲೋಲನ ಕಥೆ ದಿವ್ಯ ನಾಮಂಗಳ
ಶೀಲ ಮನದಿ ಬರೆದು ಹರಿಗೆ ಒಪ್ಪಿಸುವಂಥ ||
ಮುಂದಣ ಆಗಮ ಸಂಸಾರದ ಬಾಧೆ
ಎಂದೆಂದಿಗು ಅವರ ಭಯ ಬಿಟ್ಟಿತು
ಹಿಂದಣ ಸಂಚಿತ ಸಾಲ ಭಾರಕ್ಕೆಲ್ಲ
ಸಂದಾಯವನು ಮಾಡಿ ಕತಬಿ ಹರಿಸಿ ಬಿಟ್ಟ ||
ನುಡಿನುಡಿಗಾನಂದಬಾಷ್ಪ ರೋಮಾಂಚನ
ಮುಡುಪಿನೊಳಗೆ ಇಟ್ಟ ಕೈಜಿತವು
ಕಡೆಯ ಸಂಬಳಕೆಲ್ಲ ಮುಕುತಿ ಸಾಧನವನ್ನು
ಕೊಡುವಂತೆ ತಿರುಗದ ಚೀಟಿ ಬರೆಸಿಕೊಟ್ಟ ||
ಕಂಡ ಕಂಡವರಿಗೆ ಕಾರ್ಪಣ್ಯವಬಟ್ಟು
ಮಂಡೆ ಅಡ್ಡಾಗಿ ನಾ ಬಳಸಲಿಲ್ಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನು
ದಂಡಿಸಿ ವೀಳ್ಯವ ಕೊಟ್ಟು ಸೇವೆಯೊಳಿಟ್ಟ ||
***
ರಾಗ ಕಾಮವರ್ಧನಿ/ಪಂತುವರಾಳಿ ಆಟತಾಳ
ವ್ಯಾಪಾರ ನಮಗಾಯಿತು
ಶ್ರೀಪತಿಪಾದಾರವಿಂದ ಸೇವೆಯೆಂಬೊ ||ಪ||
ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು
ಹರಿದಾಸರ ದಯವೆಂಬೊ ವಲ್ಲಿ
ಪರಮ ಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ
ದುರಾತ್ಮರಾದವರ ಎದೆ ಮೇಲೆ ನಡೆವಂಥ ||
ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿ
ನಾಲಿಗೆ ಎಂಬೋದು ಲೇಖಣಿಕೆಯು
ಶ್ರೀಲೋಲನ ಕಥೆ ದಿವ್ಯ ನಾಮಂಗಳ
ಶೀಲ ಮನದಿ ಬರೆದು ಹರಿಗೆ ಒಪ್ಪಿಸುವಂಥ ||
ಮುಂದಣ ಆಗಮ ಸಂಸಾರದ ಬಾಧೆ
ಎಂದೆಂದಿಗು ಅವರ ಭಯ ಬಿಟ್ಟಿತು
ಹಿಂದಣ ಸಂಚಿತ ಸಾಲ ಭಾರಕ್ಕೆಲ್ಲ
ಸಂದಾಯವನು ಮಾಡಿ ಕತಬಿ ಹರಿಸಿ ಬಿಟ್ಟ ||
ನುಡಿನುಡಿಗಾನಂದಬಾಷ್ಪ ರೋಮಾಂಚನ
ಮುಡುಪಿನೊಳಗೆ ಇಟ್ಟ ಕೈಜಿತವು
ಕಡೆಯ ಸಂಬಳಕೆಲ್ಲ ಮುಕುತಿ ಸಾಧನವನ್ನು
ಕೊಡುವಂತೆ ತಿರುಗದ ಚೀಟಿ ಬರೆಸಿಕೊಟ್ಟ ||
ಕಂಡ ಕಂಡವರಿಗೆ ಕಾರ್ಪಣ್ಯವಬಟ್ಟು
ಮಂಡೆ ಅಡ್ಡಾಗಿ ನಾ ಬಳಸಲಿಲ್ಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನು
ದಂಡಿಸಿ ವೀಳ್ಯವ ಕೊಟ್ಟು ಸೇವೆಯೊಳಿಟ್ಟ ||
***
pallavi
vyApAra namagAyitu shrIpati pAdAravinda sEveyembo
caraNam 1
hari karuNave angi guru karuNa muNDAsu hari dAsara dayavembo valli
parama pApi kali embo pApASu meTTi durATmarAdavara ede mEle naDEvantha
caraNam 2
piLiya kAgada hrdaya bAyi kamaladAni nAlige embOdu lEkhaniyu
shrIlOcana kathe divya nAmangaLa shIla manavi baredu harige oppisuvantha
caraNam 3
mundaNa Agama samsArada bAdhe endendiru avara bhaya biTTadu
hiNdaNa sancita sAla bhArakkella sandAyavanu mADi katabi harisi biTTa
caraNam 4
nuDi nuDigAnanda bASpa rOmAncana muDupinoLage iTTa kaijItavu
kaDeya sambaLakella mukuti sAdanavannu koDuvante tirugada cITi baresi koTTa
caraNam 5
kaNDa kaNDavarige kArpaNyavapaTTu maNDe aDDAgi nA baLasalilla
puNDarIkAkSa shrI purandara viTTalanu daNDisi vILyava koTTu sEveyoLiTTa
***
ವ್ಯಾಪಾರವೆನಗಾಯಿತು ಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪ
ಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1
ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2
ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3
ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4
ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
********