..
ಭಾಸ್ಕರನುದಿಸುತಿರಲು ದೋಷ ನಿಲ್ಲಲ್ಯಾಕೆ ಪ
ಭಂಗಾರ ದೊರಕಿರಲು ಬ್ಯಾಗಡಿಯ ಬಯಕ್ಯಾಕೆಗಂಗಾಂಬು ಇರಲು ಕೂಪೋದ(ಕ ?)ವ್ಯಾಕೆಶೃಂಗಾರ ಗುಣನಿಧಿ ಶ್ರೀನಿವಾಸಾರ್ಯರಾಅಂಗಾರವಿರಲನ್ಯ ಔಷಧಗಳ್ಯಾಕೆ1
ತಾರಕ್ಷ ಮಂತ್ರವ ಜಪಿಸಿ ತಕ್ಷಕನ ಭಯವ್ಯಾಕೆ ಕಂ-ಠೀರವನ ಜೈಸೆ ಕರಿ ಭಯವ್ಯಾಕೆಸಾರ ಹೃದಯರು ನಮ್ಮ ಆಚಾರ್ಯ ರಾಯರತೀರಿಥಾವಿರೆ ದುರಿತ ತಿರುಗಿ ಬರಲ್ಯಾಕೆ 2
ಲೌಕಿಕಾಚಾರ ವರ್ಜಿತರೆಂಬ ಬಿರದಿನಲಿ ವೈ-ದಿಕಾಚಾರದಲಿ ದಕ್ಷ ದೀಕ್ಷಾಭವರೋಗ ವೈದ್ಯ ಮೋಹನ್ನ ವಿಠಲನ್ನ ಪ್ರೀಯಕವಿಕುಲ ತಿಲಕನಿರೆ ಕಳವಳಿಸಲ್ಯಾಕೆ 3
***