Showing posts with label ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ gopalakrishna vittala. Show all posts
Showing posts with label ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ gopalakrishna vittala. Show all posts

Monday, 2 August 2021

ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ankita gopalakrishna vittala

ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ಪ.


ದಾಸರಾಯರ ಪದವ ನಂಬಿ

ವಾಸುದೇವಗೆ ಬೇಗನೆ ಅ.ಪ


ದುಷ್ಟಮನ ಕಲ್ಮಷವ ಕಳದು

ಶಿಷ್ಟಜನರೊಳು ಕೂಡುತಾ

ಸೃಷ್ಟಿಕರ್ತನ ಭಜನೆ ಮಾಡುತ

ಕಷ್ಟಗಳನೀಡಾಡಿರಿ 1

ತಂದೆ ಮುದ್ದುಮೋಹನರೆಂ-

ತೆಂದು ಮೆರೆಯುವ ಗುರುಗಳ

ದ್ವಂದ್ವ ಪಾದವ ಭಜಿಸಿ ಈ ಭವ

ಬಂಧನವನೀಗಾಡುತ 2

ಜನನ ಮರಣ ನೀಗುವುದಕೆ

ಕೊನೆಯ ಮಾರ್ಗವು ದಾಸತ್ವ

ಘನಮನದಿ ಸ್ವೀಕಾರ ಮಾಡಿ

ವನಜ ನಯನನ ಪಾಡಿರಿ 3

ಅಂಕಿತವ ಸ್ವೀಕಾರ ಮಾಡಿರಿ

ಶಂಕಿಸದೆ ಶ್ರೀಗುರುಗಳಿಂ

ಶಂಖ ಚಕ್ರಾಂಕಿತನ ಗುಣಮನ

ಪಂಕಜದೊಳು ಸ್ಮರಿಸಿರಿ 4

ಆದಿಯಿಂದಲಿ ಇಹುದು ಜೀವಗೆ

ಶ್ರೀಧರನ ದಾಸತ್ವವು

ಈ ಧರ್ಮ ತಿಳಿಯದಲೆ ಗರ್ವದಿ

ಹಾದಿ ತಪ್ಪಲಿ ಬೇಡಿರಿ 5

ಜಗದೊಡೆಯ ಶ್ರೀ ಹರಿಯು ಸರ್ವದ

ನಿಗಮಗಳಿಗಾಧಾರನು

ಬಗೆಬಗೆಯ ಜೀವರೊಳಗಿರುತಲಿ

ಸುಗುಣವಂತರ ಪೊರೆವನು 6

ಈ ಪರಿಯ ದಾಸತ್ವ ಹೊಂದಿ ನಿ

ರ್ಲೇಪರಾಗಿರಿ ಕರ್ಮದಿಂ

ಗೋಪಾಲಕೃಷ್ಣವಿಠ್ಠಲನು

ರೂಪ ತೋರ್ವನು ಹೃದಯದಿ 7

****