Showing posts with label ದಯಪೂರ್ಣನು ಇರಲಿ ದಾನವಾಂತಕಾ ಭಯ janardhana vittala DAYAPOORNANU IRALI DAANAVAANTAKA BHAYA. Show all posts
Showing posts with label ದಯಪೂರ್ಣನು ಇರಲಿ ದಾನವಾಂತಕಾ ಭಯ janardhana vittala DAYAPOORNANU IRALI DAANAVAANTAKA BHAYA. Show all posts

Friday, 1 October 2021

ದಯಪೂರ್ಣನು ಇರಲಿ ದಾನವಾಂತಕಾ ಭಯ ankita janardhana vittala DAYAPOORNANU IRALI DAANAVAANTAKA BHAYA

 ರಾಗ : ವರಾಳಿ  ಆದಿತಾಳ

Audio by Vidwan Sumukh Moudgalya

 .

ಶ್ರೀ ತಿರುಮಲದಾಸಾರ್ಯ ವಿರಚಿತ 

( ಜನಾರ್ದನವಿಠಲಾಂಕಿತ )


 ಶ್ರೀ ಕಾಗಿನೆಲೆ ಆದಿಕೇಶವ ದೇವರ ಸ್ತೋತ್ರ ಪದ 



ದಯಪೂರ್ಣನು ಇರಲಿ ದಾನವಾಂತಕಾ

ಭಯ ನಿವಾರಣ ಭಕುತವತ್ಸಲಾದಿಕೇಶವಾ॥ಪ॥


ಸಣ್ಣವನು ನಾನು ಹೇ ಅನ್ನಾಥ ಬಂಧು  ನೀ

ಮನ್ನಣೆಯ ಮಾಡೆನ್ನ ಮನೆಯೊಳಗೆ

ಕಣ್ಣಿಗೆ ಪೊಳದೆನ್ನ ಬಿನ್ನಹವ ಕೈಕೊಂಡು

ಮುನ್ನ ಪಾಲಿಸಿದೆಂದದಿನ್ನು ಪಾಲಿಸು ವೇಗ॥೧॥


ಮರಳೆ ಬರುವಂದದಲಿ ಬರ ಕರುಣದಿಂದ ನೀ

ಶಿರಿಸಹಿತ ಸಕಲ ದೇವತಿಗಳಿಂದಾ

ಧರೆಮ್ಯಾಲೆ ಎನ್ನ ಸಂಗಡದಿ ಲೋಲ್ಯಾಡುತ

ಅರಮರೆಯ ಪರಿಹರಿಸಿ ಆನಂದ ಕೊಡುವನೇ॥೨॥


ನರಸಿಂಹ ಭಕ್ತವತ್ಸಲ ಲಕ್ಷ್ಮೀರಮಣ ನೀ

ಪರಸುಖದ ಪರಮ ಕಲ್ಯಾಣ ಗುಣನೇ

ಇರಿಸು ನಿನ್ನವರೊಳಗೆ ಈ ಥಂಡವನೇ ತಿಳಿಸಿ

ಶಿರಿಯರಸ ವರ ಜನಾರ್ದನವಿಠಲರೇಯಾ ॥೩॥

****