Showing posts with label ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು shyamasundara. Show all posts
Showing posts with label ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು shyamasundara. Show all posts

Wednesday, 1 September 2021

ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು ankita shyamasundara

 ..

ಸಲಹೊ ಸಂತತ ಸಂತಿಕೆಲವೂರ ನಿಲಯ

ಸಲೆ ನಂಬಿದೆನು ನಿನ್ನ ಜಲಜಾಂಘ್ರಿ ಪಿಡಿಕೈಯ್ಯ ಪ


ವಾನರಾಗ್ರಣಿ ಕುಂತಿ ಸೂನು ವೃಕೋದರ ಮೋದ

ಮೌನಿ ನಾಮತ್ರಯದಿ ಅವತರಿಸುತಾ

ದಾನವರ ಗರ್ವಾಖ್ಯ ಕಾನನಕೆ ಶಿಖಿ ಎನಿಸಿ

ಜಾನಕಿ ಪತಿ ಕೃಷ್ಣ ವ್ಯಾಸರನುಗ್ರಹಪಾತ್ರ 1


ವರದೇಶ ವಿಠಲನ ಚರಣ ಸೇವಕನಿಗೆ

ಸ್ಥಿರವಾದ ವೃರಾಗ್ಯ ಜ್ಞಾನ ಭಕುತಿ

ಗರೆದು ಪೊರೆಯುವದಕ್ಕೆ ಪುರದ ಹಿಂಭಾಗದಲಿ

ಇರುವ ಕಾರಣ ನಿನ್ನ ಮೊರೆ ಹೊಕ್ಕೆ ಮರೆಯದಲೆ 2


ಗಂಧವಾಹನ ನಿನ್ನ ಸಂದರುಶನದಿ ಇಂದು

ಬೆಂದು ಪೋದವು ಎನ್ನ ಪಾಪವೆಲ್ಲ

ಸಿಂಧುಜಾವರ ಶಾಮಸುಂದರನ ದಾಸರೊಳು

ಪೊಂದಿಸೆಂದಡಿಗಡಿಗೆ ವಂದಿಸುವೆ ತ್ವತ್ವದಕೆ 3

***