ದೊರೆ ಧರ್ಮಗೆ ಶಿರವ ಬಾಗಿ ಕರವ ಮುಗಿದು ಹೇಳಿದೆ ನಾ ಕರವ ಮುಗಿದು ಹೇಳಿದೆ ಹರಿಯ ಭಕ್ತರ ಸಿರಿಯ ದ್ವಾರಕೆ ದೊರೆಗೆ ಎರಗುವೆನೆಂದಳು ಶ್ರೀ ಹರಿಗೆ ಎರಗುವೆನೆಂದಳು ಪ.
ಇಂದು ನಮ್ಮ ಮಂದಿರಕ್ಕೆ ಮಂದಗಮನೆಯರಿಂದಲೆ ರಂಗ ಇಂದು ನಿಮ್ಮ ಸುಕೃತ ಬಹಳ ಬಂದುಒದಗಿತೆಂದನು ರಾಯ ಬಂದು ಒದಗಿತೆಂದನು 1
ಅಂದಮಾತು ಕೇಳಿ ಆನಂದ ಪೂರ್ಣನಾದನು ರಾಯಬಂದ ಜನರು ವೃಂದಾರಕರೆಂದು ಬಂದ ಕೃಷ್ಣ ಎಂದನು ಈಗ ಬಂದ ಸ್ವಾಮಿ ಎಂದನು 2
ಎಷ್ಟು ಯಜ್ಞವು ಎಷ್ಟು ದಾನವು ಎಷ್ಟು ಜಪ ತಪ ಹೋಮವುಮತ್ತೆ ಎಷ್ಟು ತೀರ್ಥಯಾತ್ರೆ ಫಲಿಸಿತು ಕೃಷ್ಣ ಬಂದನೆಂದು ಈಗ ಕೃಷ್ಣ ಮನೆಗೆ ಬಂದನು 3
ಧಿಟ್ಟೆರೈವರು ಕೃಷ್ಣನಂಘ್ರಿಯ ಮುಟ್ಟಿ ಮನದಲ್ಲಿಟ್ಟರುಕೃಷ್ಣ ಮನೆಗೆ ಬಂದನೆಂದುಎಷ್ಟು ಹರುಷ ಬಟ್ಟರು ಅವರು 4
ಏಳು ಜನ್ಮದ ಸುಕೃತದಿಂದ ಈ ವೇಳೆ ಒದಗಿತೆಂದನು ರಾಯ ಕೇಳ ರುಕ್ಮಿಣಿ ಭಾವೆ ಬಂದದ್ದು ಹೇಳಲ್ವಶವೆಎಂದನುರಾಯ ಹೇಳಲ್ವಶವೆ ಎಂದನು 5
ಫುಲ್ಲನಾ¨sನÀ ಪಾದ ಕಾಣದೆ ನಿಲ್ಲಲಾರೆವೆಂದರುಕ್ಷಣ ನಿಲ್ಲಲಾರೆವೆಂದರು ಚಲ್ವ ರಂಗನ ಬದಿಲೆ ಬಂದು ನಿಲ್ವೆವೀಗ ಎಂದನು ರಾಯ 6
ಏಸು ಜನ್ಮದ ಸುಕೃತದಿಂದ ರಾಮೇಶಬಂದನೆಂದನು ಸರ್ವೇಶ ಬಂದನೆಂದನು ವಾಸುದೇವರ ಪಾದಕಾಂಬುವೆ ಈ ಸಮಯದೊಳು ಎಂದನುರಾಯ 7
***
ದುಂಡುಗಟ್ಟಿ ನಿಂತರಮ್ಮದುಂಡುಗಟ್ಟುತ ಎಲ್ಲರೂದುಂಡುಗಟ್ಟುತ ಪೆಂಡೆಯಗೆಜ್ಜೆಗಳು ಘಿಲ್ಲು ಘಿಲಕು ಎನ್ನುತ ಪ.
ಕೋಗಿಲಂತೆ ಸ್ವರವನೆತ್ತಿಬಾಗಿ ಬಳಕುತ್ತ ಎಲ್ಲರೂಬಾಗಿ ಬಳುಕುತ್ತ ನಾಗವೇಣಿಯರುಚಂದ್ರನ್ಹಾಂಗೆ ಒಪ್ಪುತ ಚಂದ್ರನ್ಹಾಂಗೆ ಒಪ್ಪುತ1
ಚಿತ್ರ ಚಕೋರದಂತೆ ನಲಿದು ನರ್ತನಾಡುತ ನಲಿದು ನರ್ತನಾಡುತ ಹಸ್ತವೆಂಬೊ ಕಮಲ ಮುದದಿ ಎತ್ತಿಮುಗಿಯುತರಂಗಗೆ ಎತ್ತಿ ಮುಗಿಯುತ 2
ಲಕುಮೇಶನಲ್ಲೆ ಸ್ನೇಹ ಉಕ್ಕಿ ಚೆಲ್ಲುತ ಶರದಿ ಉಕ್ಕಿಚಲ್ಲುತ ಅಕ್ಕನೇತ್ರವೆಂಬೊ ಕುಮುದ ಚಕ್ಕನೆ ಅರಳುತ ಚಕ್ಕನರಳುತ 3
ರಂಗನಂಫ್ರಿಗೆರಗುವಂತೆ ಭೃಂಗವಾಗುತ ಎರಗಿಭೃಂಗವಾಗುತ ತಮ್ಮಅಂಗ ಮರೆದು ಮುದದಿಉತ್ತುಂಗರಾಗುತ ಉತ್ತುಂಗರಾಗುತ4
ಹರವಿದ ಕ್ಯಾದಿಗೆಯು ನÀವಿಲು ಗರಿಯಂತೊಪ್ಪುತ ನವಿಲುಗರಿಯಂತೊಪ್ಪುತ ಶ್ರೀ ರಾಮೇಶನೆಂಬೊ ಮುಗಿಲಿಗೆ ಪರಿವೆ ನಲಿಯುತ ಪರಿವೆನಲಿಯುತ5
***