Showing posts with label ಹರಿಬಾಬು ರಾಮಚಂದ್ರ ಶೀತಾಪತೇ shanti. Show all posts
Showing posts with label ಹರಿಬಾಬು ರಾಮಚಂದ್ರ ಶೀತಾಪತೇ shanti. Show all posts

Sunday, 1 August 2021

ಹರಿಬಾಬು ರಾಮಚಂದ್ರ ಶೀತಾಪತೇ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ಹರಿಬಾಬು ರಾಮಚಂದ್ರ ಶೀತಾಪತೇ ಪ


ದಶರಥನುದರದೊಳ್ ಶಿಶುವಾಗಿ ಪುಟ್ಟಿದೆ

ದಶಕಂಠನಾಶನೇ ನೀನೆವೋಹರಿ ಶೀತಾಪತೇ 1


ತಾಪತ್ರಯಗಳಿಂದ ಪಾಪಿಯಾಗಿಹೆ ನಾನು

ತಾಪವಿದಾರನೇ ನೀನೇವೋಹರಿ ಶೀತಾಪತೇ 2


ವಾಸುದೇವನೇ ನೀನು ದಾಸರ ಸಲಹುವ

ಭೂಷಣ ಪೋಷಿಪ ನೀನೇವೋಹರಿ 3


ಆಶಾಪಾಶಗಳಿಂದ ಘಾಶಿಯಾದೆನು ನಾನು

ದೋಷವಿದಾರನೇ ನೀನೇವೋಹರಿ 4


ಶಾಂತಿಪದದಲಿ ವಿಶ್ರಾಂತಿ ಕೊಟ್ಟಿನ್ನಾ

ಭ್ರಾಂತಿಯ ತೋರಿಸುವ ನೀನೇವೋಹರಿ ಶೀತಾಪತೇ 5

***