Showing posts with label ಚಾರು ಚರಣವ ಸಾರಿದೆ ಶರಣ jagannatha vittala. Show all posts
Showing posts with label ಚಾರು ಚರಣವ ಸಾರಿದೆ ಶರಣ jagannatha vittala. Show all posts

Saturday, 14 December 2019

ಚಾರು ಚರಣವ ಸಾರಿದೆ ಶರಣ ankita jagannatha vittala

ಜಗನ್ನಾಥದಾಸರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ
ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ

ಪಾದ ವನರುಹ ಧ್ಯಾನ
ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾಂಛಿತವೀವಗುಣ ಪೂರ್ಣ e್ಞÁನ
ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ನೀ ಪ್ರತಿದಿನದಿ ದಣಿಸುವುದು
ಘನವೆ ಗುರುವೆ ಪಾವನತರ ಚರಿತ 1

ಪಾದ ಕೀಲಾಲಜ ಮಧುಪಾ
ಬಾಲಕನ ಬಿನ್ನಪವ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸಂತಾಪ
ಕೇಳೋವಿಮಲe್ಞÁನ ಶೀಲ ಸ್ವರೂಪ
ಭೂಲಲನಾಧವ ಕೋಲನಂದನಾ
ಕೂಲಗವರ ಮಂತ್ರಾಲಯ ನಿಲಯ 2

ಕಲಿಕಲ್ಮಷವಿದೂರ ಕುಜನ ಕುಠರಾ
ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ
ಗಳ ಸುಶೋಭಿತ ಕಮಂಡಲ ದಂಡಧರಾ
ಜಲಧಿ ವಿಹಾರಾ
ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ
ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
*********