ele ashtami gowri haadu
ಅಷ್ಟಮೀ ಗೌರೀ ಪೂಜೆ ಮಾಡಿದಳು||
ಸುಭದ್ರೆ ಅಚ್ಚಮುತ್ತಿನ ಆರತಿಯನ್ನೆತ್ತಿದಳು||ಪ||
ಅಚ್ಯುತಾನ ಆಜ್ಞೆಯಿಂದ ಅತಿ ಭಕ್ತಿಯಿಂದ
ಮುತ್ತೈದೆತನ ಕೊಡುವ ಪುತ್ರ-ಪೌತ್ರ ಭಾಗ್ಯ ನೀಡುವ||ಅ.ಪ||
ಇಂದ್ರನಂದನನ ಸತಿಯಳು ಸುಭದ್ರೆ
ಮಿಂದುಮಡಿಯನ್ನುಟ್ಟು ಬಂದಳು
ಗಂಧ ಕುಂಕುಮ ಪರಿಮಳ ವಸ್ತ್ರ
ಚಂದವಾದ ಧೂಪ ದೀಪ ದುಂಡು ಮಲ್ಲಿಗೆ
ಗೌರಿಗೆ ಮುಡಿಸಿ ಮಂಗಳಾರತಿ ಎತ್ತಿದಳು||1||
ಭಗಿನಿ ಕೇಳೇ ಭಾವಶುದ್ಧದಿ ಭಾದ್ರಪದ ಶುದ್ಧ
ಅಷ್ಟಮೀ ಗೌರೀ ಕಥೆಯನು
ಹಿರಿಯ ಹೆಂಡತಿ ಪುರದ ಹೊರಗೆ ಇಟ್ಟಿರಲು
ಶಿರಿಯ ದೇವಿಯ ದಾರ ಕಟ್ಟಿ ದೊರೆಗೆ
ಒಲಿದು ಶಿರಿಯು ಬಂತು||2||
ಶತ್ರುಗಳನೇ ಜಯಿಸಿ ಬರುವರು ಪಾಂಡವರು
ಅಪಮೃತ್ಯು ಬರಲು ಅಂಜಿ ಓಡಲು
ಪಾಂಚಾಲಿ ಸಹಿತ ದೊರೆಗಳು ವನದೊಳಗೆ
ಅಜ್ಞಾತವಾಸ ಗೆದ್ದು ಬರುವ ಪರಿಯ ಕೇಳ್ಯಾಳು||3||
ಶಂಕರಗಂಡನ ಕಥೆಯ ಕೇಳಿ ಕಂಕಣ ಕೈಗೆ ದಾರ ಕಟ್ಟಿ
ಪಂಕಜೋದರನ ರಾಣಿ ಶಂಕೆ ಇಲ್ಲದೆ ವರವ ಕೊಡುವಳು
ಪಂಚಭಕ್ಷ್ಯ ಪಾಯಸ ಘೃತಗಳು ಮುಂಚೆ
ಲಕ್ಷ್ಮೀದೇವಿಗೆ ಎಡೆಮಾಡಿ ಬಡಿಸುವಳು||4||
***
aShTamI gaurI pUje mADidaLu
suBadre accamuttina AratiyannettidaLu||pa||
acyutAna Aj~jeyinda ati Baktiyinda
muttaidetana koDuva putra-pautra BAgya nIDuva|| a.pa||
indranandanana satiyaLu suBadre
mindumaDiyannuTTu bandaLu
gandha kuMkuma parimaLa vastra
candavAda dhUpa dIpa dunDu mallige
gaurige muDisi maMgaLArati ettidaLu||1||
Bagini kELE BAvaSuddhadi BAdrapada Suddha
aShTamI gaurI katheyanu
hiriya henDati purada horage iTTiralu
Siriya dEviya dAra kaTTi dorege
olidu Siriyu baMtu||2||
SatrugaLanE jayisi baruvaru pAnDavaru
apamRutyu baralu anji ODalu
pAncAli sahita doregaLu vanadoLage
aj~jAtavAsa geddu baruva pariya kELyALu||3||
SankaraganDana katheya kELi kankaNa kaige dAra kaTTi
pankajOdarana rANi Sanke illade varava koDuvaLu
pancaBakShya pAyasa GRutagaLu munce
lakShmIdEvige eDemADi baDisuvaLu||4||
***