Showing posts with label ಕೊಟ್ಟವರು ಸರಿಯೆ ಕೊಡದೆ ಬಿಟ್ಟವರು ಸರಿಯೆ purandara vittala. Show all posts
Showing posts with label ಕೊಟ್ಟವರು ಸರಿಯೆ ಕೊಡದೆ ಬಿಟ್ಟವರು ಸರಿಯೆ purandara vittala. Show all posts

Wednesday, 4 December 2019

ಕೊಟ್ಟವರು ಸರಿಯೆ ಕೊಡದೆ ಬಿಟ್ಟವರು ಸರಿಯೆ purandara vittala

ಕೊಟ್ಟವರು ಸರಿಯೆ |
ಕೊಡದೆ | ಬಿಟ್ಟವರು ಸರಿಯೆ ||ಪ||

ಇಕ್ಕಿದವರಿಗುಂಟು | ಮದದಲಿ | ಸೊಕ್ಕಿದರೇನುಂಟು ॥ 
ರಕ್ಕಸಾಂತಕ ನಮ್ಮ ಲಕುಮಿಪತಿಯ ಮರೆ | 
ಪೊಕ್ಕವರಾದ ಭಜಕರಿಗೆ ||೧||

ಅರಸನಾದರು ಸರಿಯೆ | ನಮಗೆ | 
ತಿರುಕನಾದರು ಸರಿಯೆ ॥ ಅರಸನಾದರು ಸರಿಯೆ | 
ಸರಸವಿರಸದಿಂ ನುಡಿಯದರೇನು ನರ | 
ಹರಿ ಪದಕಮಲವ ನಿರತ ಭಜಿಪರಿಗೆ ||೨||

ಪುಟ್ಟಿಸಿಡ ಧೊರೆಯು | ನಮಗೆ | 
ಹೊಟ್ಟೆಗೆ ಕೊಡದಿಹನೆ ॥ 
ಬೆಟ್ಟದೊಡೆಯ ನಮ್ಮ ಪುರಂದರವಿಠಲನ | 
ಗಟ್ಟಿಯಾಗಿ ನಂಬಿದ ದಾಸರಿಗೆ ||೩||
*** 


pallavi

koTTavaru sariye koDade biTTavaru sariye

caraNam 1

ikkidavariguNTu maddali sokkidarEnuNTu rakkasAntaka
namma lakumipatiya mare pokkavarAda bhajakarige

caraNam 2

arasanAdaru sariye namage tiruganAdaru sariye sarasa
virasadim nuDidarEnu narahari pada kamalava nirata bhajiparige

caraNam 3

puTTisida doreyu namage hoTtege koDadihane
beTTadoDeya namma purandara viTTalana gaTTiyAgi nambida dAsarige
***