Showing posts with label ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು mahipati. Show all posts
Showing posts with label ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು mahipati. Show all posts

Wednesday, 1 September 2021

ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು


ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು ಪ  


ನೀನಿರಲು ನಿಧಾನದ ಸುರಾಶಿ ಹೆಣ್ಣು ಹೊನ್ನಿಗಿಡುವುದ್ಯಾಕಾಶಿ ಅನುಭವಿಸುತಿರೆ ನೀ ಕೊಟ್ಟ ಭಾಸಿ ಅನುಮಾನಿಸಲ್ಯಾಕೆ ಭ್ರಮಿಸಿ 1 

ಎನ್ನ ಸ್ವಹಿತಕಿರಲು ನೀನೆ ಸಾಹ್ಯ ಇನ್ನೊಬ್ಬರಿಗೆದೆರುವದ್ಯಾಕೆ ಬಾಯಿ ಚೆನ್ನಾಗಿದೆ ನೀನೆ ಎನಗಾಯುರ್ದಾಯ ಇನ್ನೊಂದಕ ಯೋಚಿಸಲ್ಯಾಕುಪಾಯ 2 

ನೀನಾಗಿರೆ ಕಾಮಧೇನು ಕಲ್ಪವೃಕ್ಷ ನನಗಿನ್ನೊಂದ್ಹಿಡಿಯಲ್ಯಾಕಪೇಕ್ಷ ಭಾನುಕೋಟಿತೇಜವೆನಗೆ ಅಪೇಕ್ಷ ಅನುದಿನ ಮಹಿಪತಿಗೆ ಸುಭಿಕ್ಷ 3

***