Showing posts with label ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ gopalakrishna vittala. Show all posts
Showing posts with label ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ gopalakrishna vittala. Show all posts

Sunday, 1 August 2021

ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ankita gopalakrishna vittala

ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ

ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ.

ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ

ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು

ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ

ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1

ಕನಕಮಯ ಸರಪಳಿ ಥಳಥಳನೆ ಹೊಳೆಯೆ

ಮಿನುಗುವಾಭರಣಗಳು ಝಗ ಝಗಿಸುತಿರಲು

ಸನಕಾದಿ ಒಡೆಯನ ಫಣಿಪ ಹಿಂತೂಗೆ

ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2

ವೇದವನೆ ಕದ್ದವನ ಕೊಂದವನೆ ಜೋ ಜೋ

ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ

ಭೇಧಿಸಿ ಜಲಧಿ ಮೇದಿನಿ ತಂದೆ ಜೋ ಜೋ

ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3

ಬಲಿಯನೊಂಚಿಸಿದಂಥ ತರಳನೆ ಜೋ ಜೋ

ಕುಲವನೆ ಸವರಿದ ಬಲಶಾಲಿ ಜೋ ಜೋ

ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ

ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4

ತ್ರಿಪುರ ಸತಿಯರ ವ್ರತವಳಿದೆ ಜೋ ಜೋ

ಚಪಲತನದಿಂ ಹಯವನೇರಿದನೆ ಜೋ ಜೋ

ಅಪರಿವಿತದವತಾರದಿಂ ಬಳಲಿ ಬಂದು

ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5

ಅರಸು ಜಯದೇವಿ ಸಂಕರ್ಷಣನೆ ಜೋ ಜೋ

ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ

ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ

ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6

ನಾರದಾದಿಗಳೆಲ್ಲ ನರ್ತನದಿ ಪಾಡೆ

ಊರ್ವಶಿ ಅಪ್ಸರರು ನೃತ್ಯವನು ಮಾಡೆ

ತೋರೆ ಗಂಧರ್ವರು ಗಾನಗಳ ರಚನೆ

ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7

ಭಕ್ತನಾದ ವಾಯು ಸಹಿತ ಪವಡಿಸಿದೆ

ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ

ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ

ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8

ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ

ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ

ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ

ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9

****