Showing posts with label ನಾರೇರೆಲ್ಲ ಬನ್ನಿ ನಾರಾಯಣನು ನಾರಿಯಾದ purandara vittala NAARERELLA BANNI NARAYANANU NAARIYAADA. Show all posts
Showing posts with label ನಾರೇರೆಲ್ಲ ಬನ್ನಿ ನಾರಾಯಣನು ನಾರಿಯಾದ purandara vittala NAARERELLA BANNI NARAYANANU NAARIYAADA. Show all posts

Wednesday 15 December 2021

ನಾರೇರೆಲ್ಲ ಬನ್ನಿ ನಾರಾಯಣನು ನಾರಿಯಾದ purandara vittala NAARERELLA BANNI NARAYANANU NAARIYAADA


 ನಾರೇರೆಲ್ಲ ಬನ್ನಿ 

ನಾರಾಯಣನು ನಾರಿಯಾದ || ಪ 


ನಾರಾಯಣನು ನಾರಿಯಾದ 

ಅಸುರರಿಗೆಲ್ಲ ಮೋಹಿನಿಯಾದ || ಅಪ ||

ನಾರಾಯಣನು ನಾರಿಯಾದ 

ಬಲು ವೈಯ್ಯಾರ ಬಲು ಶೃಂಗಾರ


ಕಾಲಲಂದುಗೆ ಗೆಜ್ಜೆ 

ಹಂಸದ ನಡಿಗೆಗಳಂತೆ ಹೆಜ್ಜೆ

ಜಗದ ನಾರಿಯರಂತೆ ಲಜ್ಜೆ 

ಕೈಯಲಿ ಹಿಡಿದ ಬೆಣ್ಣೆಯ ಮುದ್ದೆ || ೧ ||


ಆಣಿ ಮುತ್ತಿನ ಸರ 

ನೋಡೆ ಆಕೆ ಕುಚದ ಭಾರ

ನಾರಿ ಮಣಿಯ ಜಡೆ ವಯ್ಯಾರ 

ಉಂಗುರವಿಟ್ಟಂಥ ಕರ || ೨ ||


ಬುಲಾಕಿನ ಬೆಳಕು 

ಏಕಾದಣಿ ಒಂಟಿ ಥಳಕು

ವಾಲೆ ಸರಪಳಿ ಆಡೋ ಕುಲುಕು 

ಕನ್ನಡಿಯಂದದಿ ಹೊಳೆವ ಕದಪು || ೩ ||


ವಾಲೆ ಚಳ ತುಂಬಿಟ್ಟು 

ಜರಿಗೆ ಸೀರೆ ನೆರಿಗೆ ಹಿಡಿದಿಟ್ಟು

ಸಣ್ಣ ನಡುವಿಗೆ ಚಿನ್ನದ ಕಟ್ಟು 

ಕನ್ನಡಿ ಹಾಕಿದ ಕುಪ್ಪಸ ತೊಟ್ಟು || ೪ ||


ಕರಣ ಬಾವುಲಿ ಕೆಂಪು 

ನೋಡೆ ಆಕೆ ಮುಖದ ಸೊಂಪು

ಎಳೆಮಾವಿನ ನೆರಳ ಕಂಪು 

ಕಣ್ಣಿಗೆ ಹಚ್ಚಿದ ಕಾಡಿಗೆ ಕಪ್ಪು || ೫ ||


ಮರುಗ ಮಲ್ಲಿಗೆ ದಂಡೆ 

ರಾಕಟಿ ಚೌರಿ ಹೆರಳ ಗೊಂಡೆ

ಜಡೆ ಬಂಗಾರ ವಲಿವುದ ಕಂಡೆ 

ಯೌವನ ಸ್ತ್ರೀಯಳು ಬರುವುದು ಕಂಡೆ || ೬ ||


ವಾಲೆ ಚಳ ತುಂಬಿನ ಮಾಟ 

ಮುತ್ತಿನ ಬುಗುಡಿ ವೋರೆ ನೋಟ

ಹಲಸು ಕಿತ್ತಳೆ ತೆಂಗಿನ ತೋಟ 

ರಂಭೆವನದೊಳಗಾಡೋ ಆಟ || ೭ ||


ಅರಿಸಿನ ಕುಂಕುಮ ತಟ್ಟೆ ಹಿಡಿದು 

ಮದಗಜಗಮನೆಯರೆಲ್ಲಾ ನೆರೆದು

ಜಯಜಯವೆಂದು ಕೂಗುತ ಬರಲು 

ಮೋಹಿನಿ ತಾನು ನಗುತಲಿರಲು || ೮ ||


ಚಂದ್ರ ಮುರುವಿನ ಚೆಂದ 

ಸುರರು ನೋಡೇ ಬ್ರಹ್ಮಾನಂದ

ಅವಳ ನೋಡಿ ನಾಚಿದ ಚಂದ್ರ 

ಮೋಹಿತನಾಗಿ ನಿಂತ ಶಿವನು || ೯ ||


ಹೊನ್ನು ಕಲಶವ ಪಿಡಿದು 

ಮದಗಜದಂತೆ ಮೆಲ್ಲನೆ ನಡೆದು

ಸುರರಿಗೆಲ್ಲ ಅಮೃತವೆರೆದು 

ದೈತ್ಯರಿಗೆಲ್ಲ ವಂಚಿಸಿ ಮೆರೆದು || ೧೦ ||


ಶೇಷಾಚಲ ವಾಸ ನಿನ್ನ ನಂಬಿದೆ ವೆಂಕಟೇಶ 

ಎನ್ನ ಸಲಹೋ ಶ್ರೀನಿವಾಸ 

ಅನುದಿನದಲ್ಲಿ ಭಕ್ತರ ಪೋಷ || ೧೧ ||


ಬಾಳೆ ಸುಳಿಯಂತೆ ಹೊಳೆಯುತ 

ನೀಲದಂತೆ ನೇತ್ರ ಹೊಳೆಯುತ

ನಾರಾಯಣ ಪುರಂದರ ವಿಠಲ 

ನರ್ತನ ಮಾಡುತ ಬರುವ ಬಗೆಯ || ೧೨ ||


naarErella banni 

naaraayaNanu naariyaada || pa 


naaraayaNanu naariyaada 

asurarigella mOhiniyaada || apa ||

naaraayaNanu naariyaada 

balu vaiyyaara balu shRuMgaara


kaalalaMduge gejje 

haMsada naDigegaLaMte hejje

jagada naariyaraMte lajje 

kaiyali hiDida beNNeya mudde || 1 ||


aaNi muttina sara 

nODe Ake kuchada bhaara

naari maNiya jaDe vayyaara 

uMguraviTTaMtha kara || 2 ||


bulaakina beLaku 

EkaadaNi oMTi thaLaku

vaale sarapaLi ADO kuluku 

kannaDiyaMdadi hoLeva kadapu || 3 ||


vaale caLa tuMbiTTu 

jarige sIre nerige hiDidiTTu

saNNa naDuvige cinnada kaTTu 

kannaDi haakida kuppasa toTTu || 4 ||


karaNa baavuli keMpu 

nODe Ake mukhada soMpu

eLemaavina neraLa kaMpu 

kaNNige haccida kaaDige kappu || 5 ||


maruga mallige daMDe 

raakaTi couri heraLa goMDe

jaDe baMgaara valivuda kaMDe 

youvana strIyaLu baruvudu kaMDe || 6 ||


vaale caLa tuMbina maaTa 

muttina buguDi vOre nOTa

halasu kittaLe teMgina tOTa 

raMbhevanadoLagaaDO ATa || 7 ||


arisina kuMkuma taTTe hiDidu 

madagajagamaneyarellaa neredu

jayajayaveMdu kUguta baralu 

mOhini taanu nagutaliralu || 8 ||


chaMdra muruvina cheMda 

suraru nODE brahmaanaMda

avaLa nODi naacida chaMdra 

mOhitanaagi niMta shivanu || 9 ||


honnu kalashava piDidu 

madagajadaMte mellane naDedu

surarigella amRutaveredu 

daityarigella vaMcisi meredu || 10 ||


shEShaacala vaasa ninna naMbide veMkaTESa 

enna salahO shrInivAsa 

anudinadalli bhaktara pOSha || 11 ||


baaLe suLiyaMte hoLeyuta 

nIladaMte nEtra hoLeyuta

naaraayaNa puraMdara viThala 

nartana maaDuta baruva bageya || 12 ||

****