RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ಬಂದು ನಿಲ್ಲೊ ಕಣ್ಣ ಮುಂದೆ
ಮಂದಹಾಸ ಮುಖಾ ಹರಿ ಪ
ತಂದೆ ನೀನೆ ತಾಯಿ ನೀನೆ
ನಂದದಾಯಕನೆ ಹರಿ ಅ.ಪ.
ಬಾರೊ ಶೌರಿ ಬಾ ಮುರಾರಿ
ಬಾರೊ ಭಯಹಾರಿ ಉದಾರಿ 1
ದುರಿತ ಹರಣ ಪರಮ ಕರುಣ
ಶರಣ ಉದ್ಧರಣ ಹರಿ 2
ಲಕುಮಿಕಾಂತ ಸಕಲ ಶಕ್ತ
ಅಕುಟಿಲಾತ್ಮ ಹಿತ ಹರಿ3
***