Showing posts with label ಗುರುರಾಜ ನಿನ್ನ ಹೊರತು ಪೊರೆವ shreesha keshava. Show all posts
Showing posts with label ಗುರುರಾಜ ನಿನ್ನ ಹೊರತು ಪೊರೆವ shreesha keshava. Show all posts

Friday, 27 December 2019

ಗುರುರಾಜ ನಿನ್ನ ಹೊರತು ಪೊರೆವ ankita shreesha keshava

kruti by shreesha keshava dasaru

ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ |
ಶರಣಜನರಿಷ್ಟವನೆ ಸುರತರುವಿನಂತೀವೆ ಪ

ತರಳಪ್ರಹ್ಲಾದನಾಗಿರಲು ವರಭಕುತಿಯಿಂ |
ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1

ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ |
ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2

ಶ್ರೀರಾಮಚಂದ್ರಪದಸರಸೀರುಹಾಭೃಂಗ |
ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3

ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ |
ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4

ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ |
ಭರದಿ ನಾರಾಯಣಪುರಕೈದಿದಿಯೊ ಮುದದಿ 5

ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ |
ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6

ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ |
ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
***

ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ |
ಶರಣಜನರಿಷ್ಟವನೆ ಸುರತರುವಿನಂತೀವೆ || PA ||

ತರಳಪ್ರಹ್ಲಾದನಾಗಿರಲು ವರಭಕುತಿಯಿಂ |
ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ || 1 ||

ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ |
ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ || 2 ||

ಶ್ರೀರಾಮಚಂದ್ರಪದಸರಸೀರುಹಾಭೃಂಗ |
ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ || 3 ||

ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ |
ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ || 4 ||

ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ |
ಭರದಿ ನಾರಾಯಣಪುರಕೈದಿದಿಯೊ ಮುದದಿ || 5 ||

ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ |
ದೇ ಮಹಾಸೇವೆಯ ಕೈಗೊಂಡೆಯೋ ಮುದದಿ || 6 ||

ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ |
ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ || 7 ||
***

Gururāja ninna horatu poreva dhoregaḷa kāṇe |

śaraṇajanariṣṭavane surataruvinantīve || PA ||

taraḷaprahlādanāgiralu varabhakutiyiṁ | narahariya mecciside paramakaruṇāsindho || 1 ||

vyāsamuniyu nīne vāsudēvana bhajisi | lēsāda candrikeya bhūsurarigaruhide || 2 ||

śrīrāmacandrapadasarasīruhābhr̥ṅga | śrī rāghavēndrayati surucirakr̥pāpāṅga || 3 ||

narahari sirirāma muravairi munivyāsa | irutiharu ninnoḷu dhareya pālise mudadi || 4 ||

karedalli baruvenendoreda vacanava salise | bharadi nārāyaṇapurakaididiyo mudadi || 5 ||

bhīmasētvyākhya maṭha sōmaraghutilakariṁ | dē mahāsēveya kaigoṇḍeyō mudadi || 6 ||

dōṣadūrane prabhuve āśeyiṁ sēvipara | klēśavellavanaḷidu śrīśakēśavanoliso || 7 ||

Plain English

Gururaja ninna horatu poreva dhoregala kane | saranajanaristavane surataruvinantive || PA ||

taralaprahladanagiralu varabhakutiyim | narahariya mecciside paramakarunasindho || 1 ||

vyasamuniyu nine vasudevana bhajisi | lesada candrikeya bhusurarigaruhide || 2 ||

sriramacandrapadasarasiruhabhrnga | sri raghavendrayati surucirakrpapanga || 3 ||

narahari sirirama muravairi munivyasa | irutiharu ninnolu dhareya palise mudadi || 4 ||

karedalli baruvenendoreda vacanava salise | bharadi narayanapurakaididiyo mudadi || 5 ||

bhimasetvyakhya matha somaraghutilakarim | de mahaseveya kaigondeyo mudadi || 6 ||

dosadurane prabhuve aseyim sevipara | klesavellavanalidu srisakesavanoliso || 7 ||
***