Showing posts with label ಎಚ್ಚರಿಕೆ ಎಚ್ಚರಿಕೆ ಮನವೆ purandara vittala. Show all posts
Showing posts with label ಎಚ್ಚರಿಕೆ ಎಚ್ಚರಿಕೆ ಮನವೆ purandara vittala. Show all posts

Wednesday 4 December 2019

ಎಚ್ಚರಿಕೆ ಎಚ್ಚರಿಕೆ ಮನವೆ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ ಅಟತಾಳ)

ಎಚ್ಚರಿಕೆ ಎಚ್ಚರಿಕೆ ಮನವೆ
ಅಚ್ಯುತನ ಪಾದಾರವಿಂದದಲ್ಲಿ ||ಪ||

ಬಲ್ಲಿದನು ನೀನೆಂದು ಬಡವರ ಬಾಯ
ಬಡೆಯದಿರೆಚ್ಚರಿಕೆ
ಎಳ್ಳಷ್ಟು ತಪ್ಪಿದರೆ ಯಮನಾಳು ನರಕಕ್ಕೆ
ಎಳೆದೊಯ್ವರೆಚ್ಚರಿಕೆ ||

ಮಾಡು ದಾನಧರ್ಮ ಪರರುಪಕಾರವ
ಮರೆಯದಿರೆಚ್ಚರಿಕೆ , ಇದು
ನೋಡಿ ನಡೆಸುವ ನಿಪುಣರ ನೋಡು
ನಟನೆ ಬೇಡೆಚ್ಚರಿಕೆ ||

ಬಾಳುವಾಗ ಸಿರಿ ಬರುವಾಗ ತಂದೆ ಕೇಳು
ಬೆಡಗು ಬೇಡೆಚ್ಚರಿಕೆ
ಹಾಳು ಬದುಕಿಗಾಗಿ ಹಗೆಯು ಬೇಡ ನೀ
ತಿಳಿದು ನೋಡೆಚ್ಚರಿಕೆ ||

ಹೆಣ್ಣು ಹೊನ್ನು ಮಣ್ಣು ತನ್ನನೆ ವಂಚಿಸಿ
ಹೋಹುದಿನ್ನೆಚ್ಚರಿಕೆ
ಅನ್ಯವೆಣಿಸದಿರು ನಂಬಿದ ಠಾವಿಗೆ
ಕೆಡುವೆ ನೀನೆಚ್ಚರಿಕೆ ||

ಚೆನ್ನಾಗಿ ನಾ ಬಾಳಿ ಬದುಕಿದೆನೆಂತೆಂಬ
ಶ್ರೇಷ್ಠ ಬೇಡೆಚ್ಚರಿಕೆ, ನೀ
ಮುನ್ನ ಮಾಡಿದ ಪುಣ್ಯದಿಂದಲೆ ಬಂದಿತು
ಮುಂದಿನ್ನು ಎಚ್ಚರಿಕೆ ||

ಕಾಲನ ದೂತರು ಯಾವಾಗ ಕರೆವರೊ
ಕಾಣಬಾರದೆಚ್ಚರಿಕೆ
ಶ್ರೀಲೋಲ ಪುರಂದರವಿಟ್ಠಲರಾಯನ
ಮರೆಯದಿರೆಚ್ಚರಿಕೆ ||
***

pallavi

eccarike eccarike manave acyutana pAdAravindadalli

caraNam 1

ballida nInendu baDavara bAya paDiyadireccarike
ennaSTu tappidare yamanALu narakakke eLedoivaneccarike

caraNam 2

mADu dAna dharma pararupakAravamareyadireccarike idu
nODi naDesuva nipuNara nODu naTane bEDeccarike

caraNam 3

bALuvAga siri baruvAga tande kELu beDagu bEDeccarike I
hALu badukigAgi hagayu bEDa nI tiliDu nODeccarike

caraNam 4

heNNu maNNu honnu tannane vancisi hOhudinneccarike
anyaveNisdiru nambida DhAvige keDuve nIneccarike

caraNam 5

cennAgi nA maraLi badukidenentemba shrESTa bEDeccarike nI
munna mADida puNyadindale bandidu mundinnu eccarike

caraNam 6

kAlana dUtaru yAvAga karevaro kANa bAradeccarike
shrI lOla purandara viTTalarAyana mareyadireccarike
***


ಎಚ್ಚರಿಕೆ ಎಚ್ಚರಿಕೆ ಮನವೆ - 
ನಮ್ಮಅಚ್ಯುತನ ಪಾದಾರವಿಂದ ಧ್ಯಾನದಲಿ ಪ.

ಆಶಾಪಾಶದೊಳಗೆ ಸಿಲುಕಿ - ಬಹುಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿಹೇಸಿ ಸಂಸಾರದಲಿ ಸಿಲ್ಕಿ -ಮಾಯಾಕ್ಲೇಶಅಂಬರಕೇಳಾಗೆ ಮೈಮರೆತು ಸೊಕ್ಕಿ1

ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈತನುವಿಗೆ ಯಮಪುರ ಪಯಣವೇನಿತ್ಯಮೂರು ಶೃಂಗಾರಗಳುಮಿಥ್ಯ - ಅಂತಕನ ಯಾತನೆಗಳಿಗೆ ಹರಿನಾಮ ಪತ್ಯ 2

ತೊಗಲ ಚೀಲ ಒಂಬತ್ತು ಹರುಕು -ನರಬಿಗಿದುಕಟ್ಟಿ ಒಳಗೆ ಎಲುವುಗಳ ಸಿಲುಕುಬಗೆರಕ್ತ - ಮಾಂಸದ ಹುಳುಕು - ಒಳಗೆ ಮಲ - ಕಫ -ವಾತ- ಪಿತ್ತದಸರಕು3

ದುಷ್ಟರ ಸಹವಾಸ ಹೀನ - ಬಲುಇಷ್ಟ ಜನಸಂಗವು ಹರಕೆ ಬಹುಮಾನಎಷ್ಟು ಓದಿದರಷ್ಟು ಜ್ಞಾನ - ಆದರಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ 4

ನಾಲಿಗೆಯ ಹರಿಯ ಬೀಡಬೇಡ - ತಿಂಡಿವಾಳರ ರುಚಿವಾತಗಳನೊರಿಸಬೇಡಹಾಳು ಮಾತು ಗೊಡಬೇಡ -ಶ್ರೀಲೋಲ ಪುರಂದರವಿಠಲನ ಬಿಡಬೇಡ 5
***

pallavi

eccarike eccarike manave

anupallavi

acyutana pAdAravinda dhyAnadali

caraNam 1

togalcIlombhattu haraku bahu bigida naragaLu eluvugaLa siluku
mige rakta mAmsada hoLaku oLage kapha vAta pittada saraku

caraNam 2

AshA pAshadooLage siluki bahu klEsha paTTe duccha sukhake aLugi
hEsi samsAradali siluki mAyA klEshavembuvudu kELi mai maredu sokki

caraNam 3

kaNNugaLigavakAsha koTTu para heNNugaLa nI nODi mai maredu keTTu
puNyada hAdigaLa biTTu antakannayAtanadi nI kaSTapaTTu

caraNam 4

karaNagaLigavakAsha koTTu hALu haraDegaLige nI mai maredu keTTu
hariya nAmagaLanne biTTu mah narakabAdhege nI maiya koTTu

caraNam 5

haNa heNNu maNNAse vyartha I tanuvige yama purada payaNave nitya
uNisu druSeyAdigaLu mitya antakana yAtanege harinAma padhya

caraNam 6

duSTara sahavAsa hIna balu shiSTara sangave parage bahumAna
eSTu OdidaraSTu jnAna bare shrESTha bhakuti mADuvude sAdhana

caraNam 7

nAlige hari biDa bEDa tiNDi pAla lOla ruci pAkagaLeNisa bEDa
hALu mAtugaLDa bEDa siri lOla purandara viTTlana biDa bEDa
***