Showing posts with label ರಾಮ ರಘುಕುಲ ಲಲಾಮ ರಣರಂಗ ankita gurugopala vittala RAAMA RAGHUKULA LALAAMA RANARANGA. Show all posts
Showing posts with label ರಾಮ ರಘುಕುಲ ಲಲಾಮ ರಣರಂಗ ankita gurugopala vittala RAAMA RAGHUKULA LALAAMA RANARANGA. Show all posts

Wednesday 21 April 2021

ರಾಮ ರಘುಕುಲ ಲಲಾಮ ರಣರಂಗ ankita gurugopala vittala RAAMA RAGHUKULA LALAAMA RANARANGA

 Audio by Vidwan Sumukh Moudgalya


 ಶ್ರೀ ಗುರುಗೋಪಾಲದಾಸರ ರಾಮಾವತಾರವರ್ಣನೆಯ ಕೃತಿ


 ರಾಗ : ಪೂರ್ವಿಕಲ್ಯಾಣ   ಆದಿತಾಳ


ರಾಮ ರಘುಕುಲ ಲಲಾಮ ರಣರಂಗ 

ಭೀಮ ಸುರಸಾರ್ವಭೌಮ ತಾಮಸ ಅಸುರ

ರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣ

ಕಾಮ ಗುಣಗಣಭೂಮ ॥ಪ॥


ಶಶಿ ಶೇಖರ ವರದಿಂದ ಶಶಿರಾದ್ಯ ಸುರರು

ತ್ರಿದಶರ ಬಾಧಿಸಲು ಸಾಗಿಪೋಗಿ

ಬಿಸಜ ಸಂಭವಗೆ ವಂದಿಸಿ ಮೊರೆಯಿಡಲು ಅವರ

ಕುಶಲವನು ಪೇಳೆ ತಿಳಿದು ನಲಿದು

ದಶ ದಿಶಜಯಿಸಿದ ನೃಪ ದಶರಥ ನಂದನ ನೆ-

ನಿಸಿ ಅನುನರಿಂದಲಿ ಬೆಳೆದು ನಲಿದು

ಋಷಿ ಮಖ ಕೆಡಿಸಿದ ಖರ ತ್ರಿದಶರ ದೂಷಣ ಖಳರ

ನಿಶಿತ ಶರದಲ್ಲಿ ಯಮನ ವಶವನೈದಿಸಿದಸಮಾ ॥೧॥


ಅಣಕವಾಡುತ ಶಿವನ ಧು ಮುರಿದು

ಜನಕ ನಂದನೆ ಮನಕೆ ಹರುಷ ಮಾಡಿ ಕೂಡಿ

ಕ್ಷಣದೊಳಗೆ ಪರುಶುರಾಮನ ಶರಾಸನ ಪಡದು

ಘನ ಮುದದಿ ಪುರಕೆ ಬಂದು ನಿಂದು

ಜನಕನಾಜ್ಞನೆಯವಹಿಸಿ ವನಿತೆ ಲಕ್ಷ್ಮಣ ಸಹಾ

ವನ ಕ್ರೀಡೆ ಮಾಳ್ಪೆನೆಂದು ಬಂದು 

ಮುನಿಪ ಶರಭಂಗಾ ಋಷಿಮನೋವಾಂಛಲ್ಯವನು ಸಲಿಸಿ

ದನುಜ ಮಾರೀಚನ ಹನನಗೈಸಿದ ಮಹಿಮಾ ॥೨॥


ವಕ್ಷದಿಹ ಸೀತೆಯು ಪರೋಕ್ಷನೋಪಾದಿಯಲಿ

ಲಕ್ಷಣನಿಂದ ಕೂಡಿ ಆಡಿ

ಅಕ್ಷರಿಪು ಮೊರೆ ಹೋಗಲು ಅಕ್ಷಯವರವನಿತ್ತು

ತಕ್ಷಣದಿ ಇನಜಗೊಲಿದು ನಲಿದು

ಆಕ್ಷೀಣ ಬಾಹುಬಲವಾಲಿಗಕ್ಷೇಮಗೈಸಿ ಕಪಿ

ರಿಕ್ಷ ಕಟಕವನೆ ಕರಸಿ ನೆರಸಿ

ದಕ್ಷ ವಿಭೀಷಣನ ಪಾಲಿಸಿ ದಕ್ಷಿಣಾಬ್ಧಿಯು ಬಿಗಿದಾ

ರಕ್ಷ ಕುಲ ಶಿಕ್ಷೆಯಲಿ ದಕ್ಷ ಕಮಲದಳಾಕ್ಷ ॥೩॥


ಚಂಡ ಮಾರ್ತಂಡಕರ ಅಂಡೊಲಿವನಿಬಿಡ ತಮ

ಖಂಡಿಸಿ ತೆರದಿ ಶರದಿ ಧುರದಿ

ಥಂಡ ಥಂಡದಿ ಬಂದ ಖಂಡ ಬಲುರಕ್ಕಸರಾ

ದಂಡಿಸಿ ಧರೆಗೆ ಕೆಡಹಿ ಮಡುಹಿ

ಕಂಡು ರೋಷದಿಬಂದ ಮಂಡೋದರಿಯ ಧವನ

ಕುಂಡಲ ಮುಕುಟದಿ ಮೆರೆವಾ ಶಿರವಾ

ಚಂಡಾಡಿ ತಲೆಗಳು ಭೂಮಂಡಲಕೆ ಭೂಷಣವ

ಮಂಡಿಸಿ ಮೆರದ ಉದ್ಧಂಡ ವಿಕ್ರಮಕ ಧೀರಾ ॥೪॥


ಧರೆಯ ಭಾರವ ನಿಳುಹೆ ಸುರರು ಪೂಮಳೆ ಗರಿಯೆ 

ಧರಣಿಸುತೆಯನ್ನು ಬೆರದು ಮೆರದು

ಶರಣ ವಿಭೀಷಣಗೆ ಸ್ಥಿರದಿ ಲಂಕೆಯನಿತ್ತು

ಮರುತ ಜಯಿಸೆ ಜೀವರಾನರ ನಿಜ

ಪುರಕ್ಕೆ ಐದಿ ಸಾಮ್ರಾಜ್ಯ ವಿಭವ

ಹರುಷದಲಿ ಅನುಭವಿಸಿ ಶರಣನ ಪಾಲಿಸದೆ

ಕರುಣಿ ಗುರುಗೋಪಾಲವಿಟ್ಠಲ ನಮ್ಮನು ಕಾವ॥೫॥

********