Showing posts with label ಚರಣಕಮಲ ಭಜಿಸೋ ಗೋಪಾಲಕೃಷ್ಣನ ankit narahari. Show all posts
Showing posts with label ಚರಣಕಮಲ ಭಜಿಸೋ ಗೋಪಾಲಕೃಷ್ಣನ ankit narahari. Show all posts

Tuesday, 13 April 2021

ಚರಣಕಮಲ ಭಜಿಸೋ ಗೋಪಾಲಕೃಷ್ಣನ ankit narahari

 ರಾಗ - : ತಾಳ - 


ಚರಣಕಮಲ ಭಜಿಸೋ ಗೋಪಾಲಕೃಷ್ಣನ ll ಪ ll


ಮುರಲೀ ವಾದ್ಯದಲಿ ಗೋಪರನ

ತರುಣಿಯರ ಮನವನು

ಮರುಳುಗೊಳಿಸಿದ ಪರಮ ಸುಂದರನ ಧರೆಯೊಳಗೆ

ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ll ಅ ಪ ll


ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ

ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ

ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ

ವೇಣುಗೋಪಾಲನಾ ll 1 ll


ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ 

ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ

ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ 

ಸಿಂದೂರವರದನಾ ll 2 ll


ಕೃಷ್ಣ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ

ಸೃಷ್ಟೀಷನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ

ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಟಗರಿಯುವನಾ 

ಪರಮೇಷ್ಠಿ ಜನಕನ ll 3 ll


ಹರಿ ಮಹಿಮೆ ತಿಳಿಯದೆ ಸುರಪತಿಯು ಮಳೆ

ಗರಿಯೆ ಗೋಗಳನಾ

ರಕ್ಷಣೆಯ ಮಾಡಲು ಕಿರಿಯ ಬೆರಳಲಿ

ಗಿರಿಯ ಧರಿಸಿದನಾ ಇದ

ನರಿತು ಸುರಪನು ಸುರಭಿ ಸಹ ಬಂದೆರಗಿ

ಕೃಷ್ಣನ್ನ ಪೂಜಿಸಲು ಒಲಿದನ ll 4 ll


ಶರಣಾಗತ ಜನರ ಪೊರೆಯಲು ಬಂದಿನಿಂತಿಹನಾ ಕಾ

ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ

ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು

ತುರುಪಾಲ ಕೃಷ್ಣನ ll 5 ll

***