Showing posts with label ನಿನ್ನ ಪೂಜೆಯೊ ರಾಮ ನಿನ್ನ ಪೂಜೆ rangavittala NINNA POOJEYO RAAMA NINNA POOJEYO. Show all posts
Showing posts with label ನಿನ್ನ ಪೂಜೆಯೊ ರಾಮ ನಿನ್ನ ಪೂಜೆ rangavittala NINNA POOJEYO RAAMA NINNA POOJEYO. Show all posts

Thursday, 2 December 2021

ನಿನ್ನ ಪೂಜೆಯೊ ರಾಮ ನಿನ್ನ ಪೂಜೆ ankita rangavittala NINNA POOJEYO RAAMA NINNA POOJEYO



ನಿನ್ನ ಪೂಜೆಯೊ ರಾಮ ll ಪ ll

ನಿನ್ನ ಪೂಜೆ ಹೊರತಿಲ್ಲ l ಎನ್ನ ವ್ಯಾಪಾರವೆಲ್ಲ ll ಅ ಪ ll

ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಥ, ವ್ಯಾ l
ಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನ l
ನಾನಾ ರಸ ನೈವೇದ್ಯ ಭೋಜನ ತಾಂಬೂಲ ಚರ್ವಣ l
ಮಾನಿನಿ ಮೊದಲಾದ ಚಂದನ ಗಾನಾದ ಭೋಗಗಳೆಲ್ಲ ll 1 ll

ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆ ಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿ l
ಸರ್ವ ಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು l
ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ ll 2 ll

ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ l
ಉಂಗುಷ್ಠದಿ ಲೋಕಪಾವನೆ ಗಂಗಾದೇವಿಯು l
ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ l
ರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ ll 3 ll
***



ತೋಡಿ ರಾಗ ಆದಿತಾಳ (raga tala may differ in audio)

ನಿನ್ನ ಪೂಜೆಯೊ - ರಾಮ ||ಪ||

ನಿನ್ನ ಪೂಜೆ ಹೊರತಿಲ್ಲ
ಎನ್ನ ವ್ಯಾಪಾರವೆಲ್ಲ ||ಅ.ಪ||

ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಧ್ಯ ( ಸದ್ಗ್ರಂಥ?) ವ್ಯಾ-
ಖ್ಯಾನ ಯಜ್ಞ ಸಾಧನ ಸಂಪಾದನ ಅಧ್ಯಯನ
ನಾನಾರಸ ನೈವೇದ್ಯ ಭೋಜನ ತಾಂಬೂಲಚರ್ವಣ
ಮಾನಿನಿ ಮೊದಲಾದ ಚಂದನ (ಸ್ಯಂದನ) ಗಾನದ ಭೋಗಗಳೆಲ್ಲ ||೧||

ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆ
ಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿ
ಸರ್ವಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು
ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ ||೨||

ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ
ಉಂಗುಷ್ಟದಿ ಲೋಕಪಾವನೆ ಗಂಗಾದೇವಿಯು
ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ
ರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ ||೩||
***