Showing posts with label ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು krishnavittala. Show all posts
Showing posts with label ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು krishnavittala. Show all posts

Monday, 6 September 2021

ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು ankita krishnavittala

 ರಾಗ: ಕಾಂಬೋಜಿ ತಾಳ: ಝಂಪೆ


ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು


ಎತ್ತಪೋದರು ಬಿಡದು ಸುತ್ತಿಕೊಂಡಿಹುದು ಅ.ಪ


ಬಾಳಕಡಲಲಿ ಮುಳುಗಿ ತೊಳಲಿದರೆ ಏನಹುದು

ಮಳಲಬೊಂಬೆಯತೆರದಿ ಕಳಲಿಹೋಹುದು ದೇಹ

ಬಳಲಿಬೆಂಡಾಗುತಲಿ ಕಳವಳಿಸಲೇನಹುದು

ಅಳಲಹರಿಸುವ ನಮ್ಮ ಗುರುರಾಜನ ಭಜಿಸೋ 1

ನೆಚ್ಚಿಬೆಳಸಿದ ದೇಹ ಕಿಚ್ಚಿನೊಳು ಬೇಯ್ವಾಗ

ಮೆಚ್ಚಿಗಳಿಸಿದ ಧನವು ಮುಚ್ಚಿ ಕಾಯ್ವದೇ ನಿನ್ನ

ನೆಚ್ಚಬೇಡವೋ ಈ ಕಾಯ ಎಚ್ಚೆತ್ತುಕೊಂಡಿರೋ

ಸ್ವಚ್ಚಮನದಿ ಇನ್ನು ಅರ್ಚಿಸೋ ಗುರುಗಳ 2

ಮರಣಕಾಲದಿ ನಿನ್ನ ಹರಣವ ಒಯ್ವಾಗ

ಶರಣುಶರಣೆಂದರೆ ಬಿಡುವರೇ ಮನುಜಾ

ಕರುಣಾಸಾಗರ ನಮ್ಮ ಸಿರಿಕೃಷ್ಣವಿಠಲನ

ಸ್ಮರಣೆಮಾಡುತಲಿನ್ನು ಗುರುರಾಜರನು ಭಜಿಸೋ 3

***