Showing posts with label ಮುತ್ತು ಬಂದಿದೆ ಕೇರಿಗೆ ಜನರು ಕೇಳಿ purandara vittala MUTTU BANDIDE KERIGE JANARU KELI. Show all posts
Showing posts with label ಮುತ್ತು ಬಂದಿದೆ ಕೇರಿಗೆ ಜನರು ಕೇಳಿ purandara vittala MUTTU BANDIDE KERIGE JANARU KELI. Show all posts

Friday, 10 December 2021

ಮುತ್ತು ಬಂದಿದೆ ಕೇರಿಗೆ ಜನರು ಕೇಳಿ ankita neleyadikeshava MUTTU BANDIDE KERIGE JANARU KELI

s


ಮುತ್ತು ಬಂದಿದೆ ಕೇರಿಗೆ ಜನರು ಕೇಳಿ ಮುತ್ತು ಬಂದಿದೆ ಪ.

ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪ

ಥಳಥಳಿಸುವ ಮುತ್ತುಕಮಲ ನೇತ್ರದ ಮುತ್ತುಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತುಹಲಧರಾನುಜವೆಂಬ ಪವಿತ್ರ ನಾಮದ ಮುತ್ತುಒಲಿದು ಭಜಿಪರಭವತರಿದು ಕಾಯುವ ಮುತ್ತು1

ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತುಭಂಜಿಸದ ಇತರ ಭಯವ ತೋರುವ ಮುತ್ತುಸಂಜೀವರಾಯ ಹೃದಯದೊಳಗಿಹ ಮುತ್ತು- 2

ಜಾÕನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತುಜಾÕನಿಗಳ ಮನದಲ್ಲಿ ಮೆರೆವ ಮುತ್ತುಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತುಶ್ರೀನಿಧಿ ಆದಿಕೇಶವನೆಂಬೋ ಆಣಿಯ ಮುತ್ತು 3
****