..
ಗುರುಗಳ ಶ್ರೀಪಾದವ ನಿತ್ಯ ಭಜಿಸು
ದುರಿತಗಳಲ್ಲವು ತ್ಯಜಿಸು ಪ
ಯದುಪತಿ ಕಥಾ ಬುಧರಿಗೆ ಎರೆದು ಸಾಧುವಕೀಣ್ಯರ
ಮಮತೆಯ ಘÀಳಿಸು 1
ಕವಿವರರೆನಿಸಿದ ಇವರ ಸುವಚನವಾ
ಸವಿಯನು ಸಂತತ ಭಾವದಿ ಗ್ರಹಿಸು 2
ಸ್ತಂಭನಿವಾಸರ ನಂಬಿಸುತ
ಕುಂಭಿಣೆ ತಳದೊಳು ಧನ್ಯನೆಂದೆನಿಸಲು 3
ಮಾನವಿ ನಿಲಯರ ನೀನೊಲಿಸುತಘುನ
ಮಾನವ ಜನ್ಮ ಸಾರ್ಥಕಗೊಳಿಸು 4
ಶಾಮಸುಂದರ ಪ್ರೇಮವ ಪಡೆದಾ
ಈ ಮಹಾ ಮಹಿಮರ ಸೇವಕನೆನಿಸೋ 5
***