Showing posts with label ಎಂಥ ಶ್ರೀಮಂತನೋ ಎಂಥ ಧೀಮಂತನೋ bhupati vittala. Show all posts
Showing posts with label ಎಂಥ ಶ್ರೀಮಂತನೋ ಎಂಥ ಧೀಮಂತನೋ bhupati vittala. Show all posts

Monday, 6 September 2021

ಎಂಥ ಶ್ರೀಮಂತನೋ ಎಂಥ ಧೀಮಂತನೋ ankita bhupati vittala

 ankita ಭೂಪತಿವಿಠಲ   

ರಾಗ: ಪಹಾಡಿ ತಾಳ: ದಾದರಾ


ಎಂಥ ಶ್ರೀಮಂತನೋ ಎಂಥ ಧೀಮಂತನೋ


ಎಂಥ ಶ್ರೀಮಂತನೋ ಮಂತ್ರಾಲಯದಿನಿಂತನೋ

ಕಂತು ಪಿತನ ಒಲಿಸಿದನೋ ಸಂತತ ಭಕ್ತರ ಸಲಹುವನೋ 1

ದೈತ್ಯರ ಕುಲದಲಿ ಜನಿಸಿದನೋ ಸತ್ಯಾಗ್ರಹವನು ಮಾಡಿದನೋ

ದೈತ್ಯಗೆ ಸರ್ವತ್ರದ ಶ್ರೀಹರಿಯ ನಿತ್ಯವ್ಯಾಪ್ತಿಯ ತೋರಿದನೋ 2

ಸರಸಗ್ರಂಥಗಳ ರಚಿಸಿದನೋ ದುರ್ವಾದಿಗಳನು ಜಯಿಸಿದನೋ

ಅರಸನ ಭಯ ಪರಿಹರಿಸಿದನೋ ಪುರಂದರದಾಸರ ಗುರುವರನೋ 3

ಪರಮಹಂಸ ಪೀಠಾಧಿಪನೋ ಮಧ್ವಮತಾಬ್ಧಿಗೆ ಚಂದ್ರಮನೋ

ಭಕ್ತ ಜನರ ಇಷ್ಟಾರ್ಥ ಕೊಡುತಲಿ ಕಾಮಧೇನುವಾಗಿಹನೋ

ಅಪರೋಕ್ಷಿಕೃತ ಶ್ರೀಶನೋ ಶಾಪಾನುಗ್ರಹ ಶಕ್ತನೋ

ಅಪರಾಧಗಳನು ಕ್ಷಮಿಸಿ ಭಕ್ತರಿಗೆ ಭೂಪತಿವಿಠಲನ ತೋರುವನೋ 5

***