Showing posts with label ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ mahipati. Show all posts
Showing posts with label ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ mahipati. Show all posts

Thursday, 12 December 2019

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ankita mahipati

ಭೈರವಿ ರಾಗ ಕೇರವಾ ತಾಳ

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ
ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ
ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ
ಹುಡುಕಿ ತೆಗೆದಡಕುವ ನವನೀತ ಗಡಬಡಿಸಿ ಗಡಬಡಿಸಿ ||೧||

ಮೀಸಲಮನ ಕೆನೆಮೊಸರನೆ ಮಾಡಿ ಶೋಧಿಸಿ ಶೋಧಿಸಿ
ವಾಸನೆ ಮೊಸರ ಕರಣೆಕುಸಕಿರಿದು ಮರ್ದಿಸಿ ಮರ್ದಿಸಿ
ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ
ಧ್ಯಾಸ ಬಲಿದು ಸುವಾಸನೆ ಕಳಲ ಕಡೆವದಾರಂಭಿಸಿ ||೨||

ನಾಮದಿವ್ಯ ಮಂತವ ಕಟ್ಟಿ ವಿಷಮಬಿಡಿಸಿ ವಿಷಮಬಿಡಿಸಿ
ನೇಮದಿಂದ ಸುಪ್ರೇಮದರವಿಗೆ ಘಮಗುಡಿಸಿ ಘಮಗುಡಿಸಿ
ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ
ಶ್ರಮಜನ್ಮದ ಹರುವ ಕ್ರಮಗೊಂಡಾಹಂ ಬಿಡಿಸಿ ||೩||

ನಾವು ನೀವೆಂಬ ಹೊಲೆಗುಡತಿಯ ನೆರೆಬಿಡಿಸಿ ನೆರೆಬಿಡಿಸಿ
ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ
ಭಾವದಲಿ ಸದ್ಗುರು ದಯ ನವನೀತ ಝಲ್ಲಿಸಿ ಝಲ್ಲಿಸಿ
ಸವಿಸವಿಗೊಂದು ಸುವಿದ್ಯ ಸಾರಾಯವ ಅನುಭವಿಸಿ ||೪||

ಕಡೆವ ಕುಶಲಿ ಒಬ್ಬಳೇ ಬಲು ನಿಜಜ್ಞಾನಶಕ್ತಿ ಶಕ್ತಿಯಿಂ
ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ
ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ
ಕೊಂಡಾಡಿದ ಅನುಭವಸ್ತುತಿ ಮೂಢ ಮಹಿಪತಿ ||೫||
***

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ವಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ನವನೀತ ಗಡಬಡಿಸಿ ಗಡಬಡಿಸಿ 1 

ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ ವಾಸನೆ ಮೊಸರ ಕರುಣಿಕುಸಕಿರಿದು ಮರ್ದಿನಿ ಮರ್ದಿನಿ ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ ಧ್ಯಾನ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ 2 

ನಾಮದಿವ್ಯಮಂತ್ರÀವ ಕಟ್ಟಿ ವಿಷಮ ಬಿಡಿಸಿ ವಿಷಮಬಿಡಿಸಿ ನೇಮದಿಂದ ಸುಪ್ರೇಮದರವಿಗಿ ಘಮಗುಡಿಸಿ ಘಮಗುಡಿಸಿ ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ ಶ್ರಮಜನ್ಮದಹರುವ ಕ್ರಮಗೊಂಡಾಹಂಬಿಡಿಸಿ 3 

ನಾವು ನೀವೆಂಬ ಹೊಲೆಗುಡತಿಯನ್ಯರೆ ಬಿಡಿಸಿನ್ಯರೆಬಿಡಿಸಿ ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ ನವನೀತ ಝಲ್ಲಿಸಿ ಝಲ್ಲಿಸಿ ಸವಿಸವಿಗೊಂಡು ಸುವಿದ್ಯಸಾರಾಯವ ಅನುಭವಿಸಿ 4 

ಕಡವು ಕುಶಲಿ ಒಬ್ಬಳೇ ಬಲುನಿಜಙÁ್ಞನಶಕ್ತಿ ಶಕ್ತಿ ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ ಕೊಂಡಾಡಿದ ಅನುಭವಸ್ತುತಿ ಮೂಢಮಹಿಪತಿ 5

***


***