Showing posts with label ಸಂದು ತೀರದಿರಲಿ ಆನಂದಭಕುತಿ prasannavenkata. Show all posts
Showing posts with label ಸಂದು ತೀರದಿರಲಿ ಆನಂದಭಕುತಿ prasannavenkata. Show all posts

Monday, 18 November 2019

ಸಂದು ತೀರದಿರಲಿ ಆನಂದಭಕುತಿ ankita prasannavenkata

by ಪ್ರಸನ್ನವೆಂಕಟದಾಸರು
ಸಂದು ತೀರದಿರಲಿ ಆನಂದಭಕುತಿ ಕೃಷ್ಣಹೊಂದಿ ಬಿಡಲಾರೆನೊ ಮುಕುಂದ ನಿನ್ನಂಘ್ರಿ ನಿಷ್ಠೆಯ ಪ.

ಸಿರಿಭಾಗವತಶಾಸ್ತ್ರವರಪಂಚರಾತ್ರಾಗಮಪರಮಭಾರತದ ತಾತ್ಪರ್ಯಾರ್ಥದಪರಿಚಯವಮಾಡುಹರಿಮಹೋದಾರಿ ಕೃಷ್ಣಗುರುಮಧ್ವ ನಿರೂಪದ ತರತಮ ಭಾವಾರ್ಥದ1

ಜಯರಾಯ ಗುರುಗಳ ವಿಜಯವಾಕ್ಯವ ಕೇಳಿಸುನಯತಂತ್ರಸಾರಮಂತ್ರಾಶ್ರಯ ಬಲಿಸುದ್ವಯಸಪ್ತ ಭಕ್ತಿಯಿಂದ ಆಯುಷ್ಯ ಸಾಗಿಸು ತತ್ವಚಯಜ್ಞಾನವೆಂಬ ದಿವ್ಯ ಪೀಯೂಷವುಣಿಸುವ ಸವಿ2

ಲಲಿತ ಶ್ರೀಮುದ್ರೆ ಊಧ್ರ್ವತಿಲಕ ತಪ್ತಲಾಂಛನಹೊಳೆವ ದ್ವಾದಶನಾಮ ತುಲಸಿದಂಡೆಕಳಧೌತ ಮೀರ್ವಾಂಗಾರ ನಳಿನಾಕ್ಷ ಧಾತ್ರಿಸರಗಳದೊಳೊಪ್ಪುವ ಶ್ಲಾಘ್ಯ ಬಲುವೈರಾಗ್ಯ ಭಾಗ್ಯದ 3

ಅಹರ್ನಿಶಾತ್ಮಜ ಸವಿ ಸ್ನೇಹವೆ ಶ್ರೀಪಾದದಲ್ಲಿದೇಹ ಧನ ಮನ ಒಪ್ಪಿಸಿಹೊ ವೃತ್ತಿಲಿಬಹಿರಂತಕ್ಷಣಕೆ ರೂಹುದೋರ್ವ ಭಾಷ್ಪ ತನುರುಹತೋಷಾಬ್ದಿಯೊಳು ಮಗ್ನರಹ ಮಹಿಮರ ಸಂಗ4

ಎಸೆವ ಹರಿದಿನಅನಿಮಿಷಜಾಗರದ ಕೀತ್ರ್ನೆಲಸತ್ತಿರುಳಿನಾಪರವಶನರ್ತನ ಕುಶತಲ್ಪ ಪ್ರಸನ್ವೆಂಕಟೇಶನಂಘ್ರಿಲಂಪಟನಿಯಮೇರ ತಾಳ ಮೇಳಸುಸುಖ ಸುಬ್ಬಾನ ಸೂರೆ 5
*******