..
kruti by ವೀರನಾರಾಯಣ Veeranarayana
ಕುಮಾರವ್ಯಾಸ
ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ
ಮಂಗಳಂ ವೀರನಾರಾಯಣನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ 1
ಶ್ರೀ ವರನ ವರದಿಂದ ಧೀರವನಶ್ವತ್ಥಾಮದೆವನಾಶೀರ್ವಾದದಿಂದೆ ಸ್ಫೂರ್ತಿಯ ತಾಳ್ದುಭಾವಪೂರಿತ ಪದದ ಪ್ರೌಢಿಯಲಿ ಕನ್ನಡದೆಓವಿ ಭಾರತ ಬರೆದ ಕವಿ ಪುಂಗವಂಗೆ 2
ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ 3
***