ಓಂ ನಮೋ ನಾರಾಯಣಾಯ
ತೇ ನಮೋ ನಮೋ ನಮೋ ಪ
ಓಂ ನಮೋ ಓಂಕಾರಾದಿ ನೀ ಘನ್ನ
ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ
ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ
ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ e್ಞÁನಾತ್ಮ
ವರ್ಣಾತ್ಮಕ ನೀ ಓಂಕಾರದೊಳು ಅಉ
ಮನಾದಬಿಂದು ಘೋಷ ಶಾಂತ
ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1
ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ
ಷೋಡಶ ಸುಸ್ವರಗಳ್ ಅನಂತ ವೇದಗಳ
ಕಾಲಗಳ್‍ವ್ಯಕ್ತವೊ
ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ
ದನವರತ ನಿನ್ನಾಗುಣಗಳ ನುತಿಪರೋ
ವಿಶ್ವಮೂರುತೀ ಹರೆ2
ವರ್ಣದ್ವಿತೀಯದೊಳು ನೀ ಪ್ರತಿಪಾದ್ಯ ಅಭಿವ್ಯಕ್ತವಾದ
ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ
ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು
ವಹ್ನಿ ಶನಿಯು ವರುಣಾರು ಗುಣಗಳ ನುತಿಪರೊ
ತೈಜಸ ಮೂರುತೇ3
ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ-
ವ್ಯಕ್ತಿ ಚವರ್ಗ ಪಂಚಕ e್ಞÁನೇಂದ್ರಿಯ ವೈದು
ತತ್ತದಭಿಮಾನಿ ಆಶ್ವಿನಿ ವರುಣ ಸೂರ್ಯ ಪ್ರಾಣ ದಿಗ್ದೇ-
ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4
ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ
ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್
ತದಭಿಮಾನಿಗಳು ಆದರು ಸ್ವಯಂಭುವ ಮನು ಜಯಂತ
ದಕ್ಷ ವಹ್ನಿ ದೇವತೆಗಳು ಅದುಭುತ ಮಹಿಮ
ಶ್ರೀ ತುರ್ಯ ಮೂರುತೆ 5
ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ
ಪೊಂದಿಕೊಂಡಿಹುದು ತನ್ಮಾತ್ರಪಂಚಕ
ಗಂಧ ರಸ ರೂಪಸ್ಪರ್ಶ ಶಬ್ದಗಳಿಗೆ
ಪಂಚವಾಯುಗಳಿಹರಯ್ಯ
ಬಂಧ ಮೋಚಕ ನೀ ಕಾರಣ ಹರೆ 6
ಘೋಷದಿಂದಲಭಿವ್ಯಕ್ತಿ ಪಂಚಮನೋ
ವೃತ್ತಿಗಳದರಭಿಮಾನಿ
ಓಷಧೀಧರ ಖಗಪ ಶೇಷೇಂದ್ರ ಕಾಮರು
ಘೋಷವಾಚ್ಯ ನೀನಂತರಾತ್ಮ ಪ್ರತಿಪಾದ್ಯನಹುದೋ
ಪಕಾರ ಪಂಚವರ್ಣ
ದೋಷರಹಿತ ಮನೋಧಾಮದಿ ನೀ ದೊರೆ 7
ಪರಮಾತ್ಮನೆ ನೀ ಶಾಂತವಾಚ್ಯ
ಪ್ರತಿಪಾದ್ಯನಹುದೋ ಅಭಿವ್ಯಕ್ತಿಯ
ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ
ನಿರುತದಿ ಯಜ್ಞರಾಮ ಲಕುಮಿ ಪತಿಯು
ವರಹ ಶೇಷ ಷಡ್ಗುಣಸಾರ
ಇರುವರಿವರ ಪರಿ ಅರಿಯೆನೊ ಹರಿಯೆ 8
ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ e್ಞÁನಾತ್ಮ
ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ
ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ
ತೋರುವ ಶ್ರೀವೇಂಕಟೇಶ
ಉರಗಾದ್ರಿವಾಸವಿಠಲ ಮೂರುತೇ 9
****