Showing posts with label ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ vijaya vittala. Show all posts
Showing posts with label ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ vijaya vittala. Show all posts

Wednesday, 16 October 2019

ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ankita vijaya vittala

ಗಂಗೆ ಸನ್ಮಂಗಳಾಂಗೆ
ರಂಗನಂಘ್ರಿಯ ಸಂಗೆ
ತುಂಗೆ ಕಾರುಣ್ಯ ಪಾಂಗೆ
ಅಸಿತಾಂಗೆ ತಿಂಗಳಾನನೆ ಪ

ಪರಮೇಷ್ಟಿ ಪಾತ್ರಜಾತೆ
ವರುಣನ್ನ ನಿಜದೈಯಿತೆ
ಸುರ ಮುನಿಗಣವಿನುತೆ
ವರದಾತೆ ಸರ್ವಖ್ಯಾತೆ
ತರಣಿಸುತನ ಉದ್ಧರಿಸಿದೆ
ಕರುಣದಿ ಧರೆಯೊಳು ನಿನಗೆ ಎ
ದುರುಗಾಣೆ ಶರಣಾ 1

ಭಯ ಪಾಪ ತಾಪದೊರೆ
ಜಯ ಜಯ ಗುಣಸಾರೇ
ತ್ರಯಭುವನ ಉದ್ಧಾರೆ
ಆಯುತಾರ್ಕವರ್ನ ನೀರೆ
ನಯವ ಭಕುತಿ ಹೃ
ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2

ಘನ್ನ ವಾರಣಾಸಿ ಕಾಸಿವನ
ಆನಂದ ನಿವಾಸಿ ಪ್ರಣತ ಜನರಘನಾಶ
ಮಣಿಭೂಷೆ ಸೌಖ್ಯರಾಸಿ
ಅನನುತ ವಿಜಯವಿಠ್ಠಲನ ಮನಸಿನಲಿ
ನೆನೆಸುವ ಸಾಧನ ಕೊಡು ವಿರಜೇ 3
*********