Showing posts with label ಬಾರೋ ಗೋಪಿನಾಥ ನಿನ್ನಗಲಿರಲಾರೆನೊ vijayaramachandra vittala. Show all posts
Showing posts with label ಬಾರೋ ಗೋಪಿನಾಥ ನಿನ್ನಗಲಿರಲಾರೆನೊ vijayaramachandra vittala. Show all posts

Friday, 6 August 2021

ಬಾರೋ ಗೋಪಿನಾಥ ನಿನ್ನಗಲಿರಲಾರೆನೊ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಬಾರೊ ಗೋಪಿನಾಥ ನಿನ್ನಗಲಿರಲಾರೆನೊ ಪ


ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ ಅ.ಪ


ವಾರಿಚರ ಕೂರ್ಮನೆ ಧಾರುಣಿ ತಂದನೆ

ತೋರ ಕೊರಳ ಹಾರ ವರಮೃಗರೂಪನೆ 1


ಭೂದಾನವ ಬೇಡಿ ಮೇದಿನಿ ಪಾಲಕರ ಕೊಂದು

ಆ ದಶಾಸ್ಯನಳಿದ ಸೋದರ ಮಾವನ ವೈರಿ 2


ಬೆತ್ತಲೆ ನಿಂತು ದುಷ್ಕøತ್ಯ ಮಾಳ್ಪರ ಕೊಂದು

ಉತ್ತಮ ತುರಗವೇರಿದ ಭೃತ್ಯವತ್ಸಲ ದೇವ 3


ವಿಜಯ ರಾಮಚಂದ್ರವಿಠಲರಾಯನೆ

ಸುಜನ ವಂದಿತ ನಿನ್ನ ಭಜನೆಯ ಪಾಲಿಸೊ 4

***