Showing posts with label ಥಟ್ಟನೆ ನಡೆ ಗೋಕುಲಕಕ್ರೂರ ಅಸುರಾವೇಶವ pranesha vittala. Show all posts
Showing posts with label ಥಟ್ಟನೆ ನಡೆ ಗೋಕುಲಕಕ್ರೂರ ಅಸುರಾವೇಶವ pranesha vittala. Show all posts

Tuesday, 12 November 2019

ಥಟ್ಟನೆ ನಡೆ ಗೋಕುಲಕಕ್ರೂರ ಅಸುರಾವೇಶವ ankita pranesha vittala

by ಪ್ರಾಣೇಶದಾಸರು
ಥಟ್ಟನೆ ನಡೆ ಗೋಕುಲಕಕ್ರೂರ ಅಸುರಾವೇಶವ ತಾಳು |ಕೃಷ್ಣನಕರತಾ ಈ ಬಗೆಯಿಂದಲಿಪೇಳ್ವೆ ಉಪಾಯವ ಕೇಳು ಪ

ಮಲ್ಲರಕುವಲಯಪೀಡಾ ಪಥÀದೊಳು |ನಿಲ್ಲಿಸಿಹನು ಎನಬೇಡ ||ಬಿಲ್ಲು ಹಬ್ಬಕೆ ಕರೆಸಿಹನೆನ್ನು |ಕೊಲ್ಲುವದುಸರಲಿ ಬೇಡ1

ನಿಮ್ಮಾವನು ನಿನ್ನ ಕಾಣದೆ ಬಳಲುವ- |ವಮ್ಮಿಮ್ಮೆಲ್ಲವು ಎನ್ನು ||ಸುಮ್ಮನೆ ಆಲಸ್ಯಾತಕೆ ಹೋಗುವ |ಘಮ್ಮನೆ ಬಾ ಬಾ ಎನ್ನು 2

ಪುಷ್ಟಿ ಮಾಡಿ ಮಾತುಗಳಿಂ ಮೆಚ್ಚಿಸಿ |ನೆಟ್ಟನೆ ಬಹಪರಿಮಾಡು|ಬಿಟ್ಟರೆ ನಿನ್ನ ಶ್ರಮ ಬಲ್ಲನು ಪ್ರಾಣೇಶ |ವಿಠ್ಠಲನೆವೇ ನೋಡು 3
********